ಸಾಂಕ್ರಾಮಿಕದಿಂದ ಜೀವನೋಪಾಯಕ್ಕೆ ಕುತ್ತು, ಕೌಟುಂಬಿಕ ಉಳಿತಾಯದಲ್ಲಿ ಕುಸಿತ: ಆರ್‌ಬಿಐ

Update: 2021-03-20 16:59 GMT

ಹೊಸದಿಲ್ಲಿ,ಮಾ.20: ಹೆಚ್ಚು ಸಾಲಗಳು ಮತ್ತು ಹೆಚ್ಚುತ್ತಿರುವ ಬಳಕೆ ವೆಚ್ಚವು 2020-21ನೇ ಸಾಲಿನ ದ್ವಿತೀಯ ತ್ರೈಮಾಸಿಕದಲ್ಲಿ ಕುಟುಂಬಗಳ ಉಳಿತಾಯಗಳ ಕುಸಿತಕ್ಕೆ ಕಾರಣವಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಜಿಡಿಪಿಯ ಶೇ.21ರಷ್ಟಿದ್ದ ಉಳಿತಾಯ ದರವು ಶೇ.10.4ಕ್ಕೆ ಕುಸಿದಿದೆ ಎಂದು ಆರ್‌ಬಿಐ ಮಾರ್ಚ್ ಬುಲೆಟಿನ್‌ಗಾಗಿ ತನ್ನ ಆರ್ಥಿಕ ಸ್ಥಿತಿ ವರದಿಯಲ್ಲಿ ಹೇಳಿದೆ.

  2020 ಸೆಪ್ಟೆಂಬರ್ ಅಂತ್ಯಕ್ಕೆ ಉಳಿತಾಯ ದರ ಕುಸಿದಿದೆಯಾದರೂ ಈಗಲೂ ಹಿಂದಿನ ಇಡೀ ವರ್ಷದ ಉಳಿತಾಯ ದರವಾಗಿದ್ದ ಶೇ.9.8ಕ್ಕಿಂತ ಹೆಚ್ಚೇ ಇದೆ ಎಂದು ಹೇಳಿರುವ ವರದಿಯು,ಸಾಂಕ್ರಾಮಿಕದಿಂದಾಗಿ ಕೌಟುಂಬಿಕ ಆದಾಯಗಳಿಗೆ ಹೊಡೆತ ಬಿದ್ದಿರುವುದರಿಂದ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ ಸಾಲಗಳನ್ನು ಪಡೆದುಕೊಂಡಿದ್ದು ಸೆಪ್ಟೆಂಬರ್‌ಗೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಉಳಿತಾಯ ದರವು ಕಡಿಮೆಯಾಗಿರಲು ಕಾರಣವಾಗಿರಬಹುದು ಎಂದು ಒಪ್ಪಿಕೊಂಡಿದೆ.

2020 ಜೂನ್ ಅಂತ್ಯಕ್ಕೆ 35.4ರಷ್ಟಿದ್ದ ಕುಟುಂಬಗಳ ಸಾಲಗಳು ಮತ್ತು ಜಿಡಿಪಿಯ ಅನುಪಾತ ಸೆಪ್ಟೆಂಬರ್ ಅಂತ್ಯಕ್ಕೆ 37.1ಕ್ಕೆ ಏರಿಕೆಯಾಗಿದೆ ಎಂದೂ ವರದಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News