ಅಯೋಧ್ಯೆಯಲ್ಲಿ 1.5 ಲಕ್ಷ ಚದರಡಿ ಜಮೀನು ಖರೀದಿಸಿದ ರಾಮಮಂದಿರ ಟ್ರಸ್ಟ್

Update: 2021-03-20 17:06 GMT

ಲಕ್ನೊ, ಮಾ.20: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರದ ಸಮೀಪದ ಸುಮಾರು 1.5 ಲಕ್ಷ ಚದರಡಿ ಜಮೀನನ್ನು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಖರೀದಿಸಿದೆ ಎಂದು ಮೂಲಗಳು ಹೇಳಿವೆ. ಭದ್ರತಾ ಸಿಬ್ಬಂದಿಗೆ ಹಾಗೂ ಭಕ್ತರಿಗೆ ಉಳಿದುಕೊಳ್ಳುವ ವ್ಯವಸ್ಥೆ ನಿರ್ಮಿಸಲು ಹಾಗೂ ಟ್ರಸ್ಟ್‌ನ ಚಟುವಟಿಕೆ ನಡೆಸಲು ಈ ಜಮೀನನ್ನು ಬಳಸಿಕೊಳ್ಳಲಾಗುವುದು.

 ರಾಮಮಂದಿರವನ್ನು ವಿಸ್ತರಿಸುವ ಉದ್ದೇಶದಿಂದ ರಾಮಜನ್ಮಭೂಮಿ ನಿವೇಶನದ ಸುತ್ತಮುತ್ತಲಿನ ಜಮೀನಿನ ಪಟ್ಟಿಮಾಡಿ ಅದರ ಮಾಲಕರನ್ನು ಗುರುತಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಟ್ರಸ್ಟಿ ಅನಿಲ್ ಮಿಶ್ರಾ ಹೇಳಿದ್ದಾರೆ. ಈ ಮಧ್ಯೆ, ರಾವಣನಿಂದ ಅಪಹರಿಸಲ್ಪಟ್ಟು ಶ್ರೀಲಂಕಾದಲ್ಲಿ ಬಂಧಿಯಾಗಿದ್ದ ಸೀತಾದೇವಿಯನ್ನು ಇರಿಸಲಾಗಿದ್ದ ಸೀತಾ ಎಲಿಯಾ ಪ್ರದೇಶದಿಂದ ತರುವ ಕಲ್ಲನ್ನು ಅಯೋಧ್ಯೆಯ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಬಳಸಲಾಗುವುದು ಎಂದು ಟ್ರಸ್ಟ್‌ನ ಮೂಲಗಳು ಹೇಳಿವೆ. ಭಾರತಕ್ಕೆ ನಿಯೋಜಿತವಾಗಿರುವ ಶ್ರೀಲಂಕಾದ ಹೈಕಮಿಷನರ್ ಮಿಲಿಂದಾ ಮೊರಗೊಡ ಅವರು ಭಾರತಕ್ಕೆ ಹಸ್ತಾಂತರಿಸಲಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News