ಕಳೆದ ವರ್ಷ ದೇಶದಲ್ಲಿ ಸೈಬರ್ ದಾಳಿ ಪ್ರಕರಣಗಳಲ್ಲಿ ಶೇ 300ರಷ್ಟು ಏರಿಕೆ: ಕೇಂದ್ರ ಗೃಹ ಸಚಿವಾಲಯ

Update: 2021-03-23 15:02 GMT

ಹೊಸದಿಲ್ಲಿ:  ಕೊರೋನಾ ಸಾಂಕ್ರಾಮಿಕದ ನಡುವೆ ಕಳೆದ ವರ್ಷ  ದೇಶದಲ್ಲಿ ಸೈಬರ್ ದಾಳಿ ಪ್ರಕರಣಗಳ ಸಂಖ್ಯೆ ಶೇ300ರಷ್ಟು ಏರಿಕೆ ಕಂಡು 11,58,208 ತಲುಪಿದೆ. ಈ ಸಂಖ್ಯೆ 2019ರಲ್ಲಿ 3,94,499 ಆಗಿತ್ತು ಎಂದು ಕೇಂದ್ರ ಗೃಹ ಸಚಿವಾಲಯ ಮಂಗಳವಾರ ಸಂಸತ್ತಿಗೆ  ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ದತ್ತಾಂಶಗಳನ್ನು ಆಧರಿಸಿ ಮಾಹಿತಿ ನೀಡಿದೆ.

ಯಾವ ರೀತಿಯ ಸೈಬರ್ ದಾಳಿ ನಡೆದಿದೆ ಎಂಬ ಮಾಹಿತಿಯನ್ನು ಸಚಿವಾಲಯ ನೀಡದೇ ಇದ್ದರೂ ಕಳೆದ ವರ್ಷ ಕೋವಿಡ್ ಲಾಕ್ ಡೌನ್‍ನಿಂದಾಗಿ ಜನರ ಹೆಚ್ಚಿದ ಆನ್ಲೈನ್ ಚಟುವಟಿಕೆಗಳಿಂದ ಸೈಬರ್ ದಾಳಿ ಪ್ರಕರಣಗಳಲ್ಲೂ ಏರಿಕೆಯಾಗಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ಕಳೆದ ವರ್ಷ ಸೈಬರ್ ದಾಳಿ ಹೆಚ್ಚಾಗಲು ಮುಖ್ಯವಾಗಿ ಎರಡು ಕಾರಣಗಳಿವೆ ಎಂದು ಸೈಬರ್ ಕಾನೂನು ತಜ್ಞ ಪವನ್ ದುಗ್ಗಲ್ ಹೇಳಿದ್ದಾರೆ. “ಮೊದಲು, ಕೋವಿಡ್ -19 ಕುರಿತ ಭಯ ಮತ್ತು ಭೀತಿ, ಸೈಬರ್-ಅಪರಾಧಿಗಳು ತಮ್ಮ ಲಾಭಕ್ಕಾಗಿ ಈ ರೀತಿಯ ದಾಳಿಗಳನ್ನು ಮಾಡಲು ಪ್ರಾರಂಭಿಸಿದರು. ಎರಡನೆಯದಾಗಿ, ಮನೆಯಿಂದ ಕೆಲಸವು (work from home) ಸೈಬರ್ ಭದ್ರತೆಗೆ ಹೆಚ್ಚಿನ ಗಮನ ನೀಡುವುದಿಲ್ಲ ಎಂದು ಖಚಿತಪಡಿಸಿತು. ಕೆಲಸದ ಸ್ಥಳಕ್ಕಿಂತ ಮನೆಯಲ್ಲಿನ ಕಂಪ್ಯೂಟರ್‌ ಗಳಿಗೆ ದಾಳಿ ಮಾಡುವುದು ತುಂಬಾ ಸುಲಭ ಎಂದು ಹೇಳಿಕೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News