×
Ad

ಚೆನ್ನೈ ಸೂಪರ್ ಕಿಂಗ್ಸ್ ನ ನೂತನ ಜರ್ಸಿ ಅನಾವರಣಗೊಳಿಸಿದ ಎಂಎಸ್ ಧೋನಿ

Update: 2021-03-25 11:07 IST
Image Source : @CHENNAIIPL

ಚೆನ್ನೈ: ಮುಂಬರುವ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಗೆ(ಐಪಿಎಲ್)ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿ ತಂಡದ ಹೊಸ ಜರ್ಸಿಯನ್ನು ಬುಧವಾರ ಅನಾವರಣಗೊಳಿಸಿದರು.

ಫ್ರಾಂಚೈಸಿ ಹಂಚಿಕೊಂಡಿರುವ ವೀಡಿಯೊದಲ್ಲಿ ಭಾರತದ ಮಾಜಿ ನಾಯಕ ಧೋನಿ ಜರ್ಸಿಯನ್ನು ಬಾಕ್ಸ್‍ನಿಂದ ಹೊರ ತೆಗೆದು ಅಭಿಮಾನಿಗಳು ಹಾಗೂ ಫಾಲೋವರ್ಸ್‍ಗಳಿಗೆ ಪ್ರದರ್ಶಿಸಿದರು.

ಸಿಎಸ್‍ಕೆ ಹೊಸ ಲುಕ್ ಇರುವ ಜರ್ಸಿಯನ್ನು ಹೊರ ತಂದಿದೆ. ಮರು ವಿನ್ಯಾಸಗೊಳಿಸಿರುವ ಜರ್ಸಿಯನ್ನು ಭಾರತೀಯ ಸಶಸ್ತ್ರ ಪಡೆಗಳಿಗೆ ಸಮರ್ಪಿಸಲಾಗಿದೆ.

ಟೆರಿಟೋರಿಯಲ್ ಆರ್ಮಿಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿರುವ ಧೋನಿ ಎಪ್ರಿಲ್ 9ರಿಂದ ಆರಂಭವಾಗಲಿರುವ ಈ ವರ್ಷದ ಐಪಿಎಲ್ ನಲ್ಲಿ ಹೊಸ ಜರ್ಸಿಯನ್ನು ಧರಿಸಿಕೊಂಡು ಸಿಎಸ್ ಕೆ ಫ್ರಾಂಚೈಸಿಯನ್ನು ಮುನ್ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News