ಸಚಿನ್ ತೆಂಡುಲ್ಕರ್ ಗೆ ಕೊರೋನ ಪಾಸಿಟಿವ್
ಮುಂಬೈ: ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಗೆ ಕೋವಿಡ್-19 ಸೋಂಕು ತಗಲಿರುವುದು ದೃಢಪಟ್ಟಿದೆ. ಈ ವಿಚಾರವನ್ನು ತೆಂಡುಲ್ಕರ್ ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ,
ಸಚಿನ್ ಸದ್ಯ ತಮ್ಮ ನಿವಾಸದಲ್ಲೇ ಕ್ವಾರಂಟೈನ್ ನಲ್ಲಿದ್ದಾರೆ. ವೈದ್ಯರ ಸಲಹೆಯಂತೆ ಅಗತ್ಯವಿರುವ ಎಲ್ಲ ಶಿಷ್ಟಾಚಾರಗಳನ್ನು ಪಾಲಿಸಲಿದ್ದಾರೆ ಎಂದು ತಿಳಿದುಬಂದಿದೆ.
"ನಾನು ಸ್ವತಃ ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡಿದ್ದು, ಶಿಫಾರಸು ಮಾಡಿರುವ ಎಲ್ಲ ಮುನ್ನಚ್ಚರಿಕೆಯನ್ನು ತೆಗೆದುಕೊಳ್ಳುವೆ. ಕೊರೋನದ ಸೌಮ್ಯ ಲಕ್ಷಣವಿದ್ದ ಕಾರಣ ನಾನು ಪರೀಕ್ಷೆಗೆ ಒಳಗಾಗಿದ್ದು, ಪಾಸಿಟಿವ್ ಆಗಿದೆ. ಮನೆಯವರಲ್ಲಿರುವ ಇತರ ಸದಸ್ಯರಿಗೆ ನೆಗೆಟಿವ್ ವರದಿ ಬಂದಿದೆ. ನಾನೀಗ ಮನೆಯಲ್ಲಿ ಕ್ವಾರಂಟೈನ್ ಆಗಿದ್ದು, ವೈದ್ಯರು ನೀಡುವ ಅಗತ್ಯವಿರುವ ಎಲ್ಲ ಶಿಷ್ಟಾಚಾರಗಳನ್ನು ಪಾಲಿಸುತ್ತೇನೆ. ನನಗೆ ಬೆಂಬಲ ನೀಡಿರುವ ಎಲ್ಲ ಆರೋಗ್ಯ ಕ್ಷೇತ್ರದ ವೃತ್ತಿಪರರರಿಗೆ ಹಾಗೂ ದೇಶದ ಎಲ್ಲ ಜನರಿಗೆ ಧನ್ಯವಾದ ಹೇಳುವೆ. ಎಲ್ಲರೂ ತಮ್ಮ ಕಾಳಜಿವಹಿಸಿ'' ಎಂದು ಸಚಿನ್ ತೆಂಡುಲ್ಕರ್ ಟ್ವೀಟಿಸಿದ್ದಾರೆ.
— Sachin Tendulkar (@sachin_rt) March 27, 2021