1 ಕೋ. ರೂ. ಮೌಲ್ಯದ ಹಾವಿನ ವಿಷ ವಶ, 6 ಮಂದಿಯ ಬಂಧನ
Update: 2021-03-28 23:11 IST
ಭುವನೇಶ್ವರ, ಮಾ. 28: ಹಾವುಗಳ ವಿಷ ಕಳ್ಳ ಸಾಗಾಟ ಮಾಡುವ ಜಾಲವನ್ನು ಭುವನೇಶ್ವರ ಅರಣ್ಯ ಇಲಾಖೆ ಅಧಿಕಾರಿಗಳು ಶನಿವಾರ ಭೇದಿಸಿದ್ದಾರೆ ಹಾಗೂ ಮಹಿಳೆ ಸೇರಿದಂತೆ 6 ಮಂದಿಯನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ 1 ಲೀಟರ್ ಹಾವಿನ ವಿಷವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಅರಣ್ಯಾಧಿಕಾರಿ (ಡಿಎಫ್‌ಒ) ಅಶೋಕ್ ಮಿಶ್ರಾ ಹೇಳಿದ್ದಾರೆ.
‘‘ನಾವು ಬಾರ್‌ಗಢದಿಂದ 1 ಲೀಟರ್ ಹಾವಿನ ವಿಷ ಹಾಗೂ ತಲಾ ಐದು ಮಿಲಿ ಲೀಟರ್‌ನ ಐದು ಸೀಸೆಗಳನ್ನು ವಶಪಡಿಸಿಕೊಂಡಿದ್ದೇವೆ. ಬಾಲಸೂರಿನ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಿದ್ದೇವೆ. ಈ ವಿಷಕ್ಕೆ ಮಾರುಕಟ್ಟೆಯಲ್ಲಿ 1 ಕೋಟಿ ರೂಪಾಯಿ ಮೌಲ್ಯವಿದೆ’’ ಎಂದು ಅವರು ತಿಳಿದ್ದಾರೆ.
ಈ ಒಂದು ಲೀಟರ್ ವಿಷವನ್ನು 200 ನಾಗರ ಹಾವುಗಳಿಂದ ಸಂಗ್ರಹಿಸಲಾಗಿದೆ ಎಂದು ಮಿಶ್ರಾ ತಿಳಿಸಿದ್ದಾರೆ.