×
Ad

ಹೋಳಿ ಆಚರಣೆ: ಉ.ಪ್ರದೇಶದಲ್ಲಿ ಪಾನಮತ್ತರಿಂದ 60ರ ಹರೆಯದ ಮಹಿಳೆಯನ್ನು ಥಳಿಸಿ ಹತ್ಯೆ

Update: 2021-03-29 21:28 IST

ಇಟಾವಾ,ಮಾ.29: ತನ್ನ ಮನೆಯ ಹೊರಗೆ ಹೋಳಿ ಉತ್ಸವದ ಆಚರಣೆಯನ್ನು ವಿರೋಧಿಸಿದ್ದ 60ರ ಹರೆಯದ ಮಹಿಳೆಯನ್ನು ಗುಂಪು ಥಳಿಸಿ ಹತ್ಯೆಗೈದಿರುವ ಮತ್ತು ಆಕೆಯ ಕುಟುಂಬದ ಐವರನ್ನು ಗಾಯಗೊಳಿಸಿರುವ ಘಟನೆ ಇಲ್ಲಿಯ ಮೇವಾತಿ ತೋಲಾ ಬಡಾವಣೆಯಲ್ಲಿ ಸೋಮವಾರ ನಡೆದಿದೆ.

ಹೋಳಿ ಹಬ್ಬದ ಸಂಭ್ರಮದಲ್ಲಿದ್ದವರು ಪಾನಮತ್ತರಾಗಿದ್ದು,ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಮಹಿಳೆಯ ಮನೆಗೆ ನುಗ್ಗಿ ದೊಣ್ಣೆಗಳು ಮತ್ತು ಕಲ್ಲುಗಳಿಂದ ಹೊಡೆದು ಆಕೆಯನ್ನು ಸಾಯಿಸಿದ್ದಾರೆ. ಕುಟುಂಬದ ಸದಸ್ಯರು ಮಹಿಳೆಯ ರಕ್ಷಣೆಗೆ ಧಾವಿಸಿದಾಗ ದುಷ್ಕರ್ಮಿಗಳು ಅವರನ್ನೂ ಥಳಿಸಿದ್ದಾರೆ. ಗಾಯಗೊಂಡವರಲ್ಲಿ ಇಬ್ಬರು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದ್ದಾರೆ ಎಂದು ಹೆಚ್ಚುವರಿ ಎಸ್‌ಪಿ ಪ್ರಶಾಂತಕುಮಾರ್ ಪ್ರಸಾದ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News