ಒಂದೇ ವಾರದಲ್ಲಿ ಮೂರನೇ ಬಾರಿ ತೈಲ ದರ ಕುಸಿತ :ಪೆಟ್ರೋಲ್ ದರ 22 ಪೈಸೆ, ಡೀಸೆಲ್ ದರ 23 ಪೈಸೆ ಕಡಿತ
ಹೊಸದಿಲ್ಲಿ,ಮಾ.30: ಅಂತಾರಾಷ್ಟ್ರೀಯ ಕಚ್ಚಾ ತೈಲ ದರಗಳು ತುಸು ಇಳಿಮುಖ ವಾಗುತ್ತಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಒಂದೇ ವಾರದಲ್ಲಿ ಮೂರನೆ ಬಾರಿಗೆ ಕಡಿತವುಂಟಾಗಿದೆ.
ಮಂಗಳವಾರ ಪೆಟ್ರೋಲ್ ದರದಲ್ಲಿ ಪ್ರತಿ ಲೀಟರ್‌ಗೆ 22 ಪೈಸೆ ಹಾಗೂ ಡೀಸೆಲ್ ದರದಲ್ಲಿ 23 ಪೈಸೆ ಕಡಿತವಾಗಿದೆ. ನೂತನ ಬೆಲೆ ಪರಿಷ್ಕರಣೆಯಿಂದಾಗಿ ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 90.56 ರೂಬ. ಹಾಗೂ ಡೀಸೆಲ್ ದರ ಪ್ರತಿ ಲೀಟರ್‌ಗೆ 80.87 ರೂ. ಆಗಿದೆ.
ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ ದರವು 97.19 ರೂ.ನಿಂದ 96.98ಕ್ಕೆ ಇಳಿದಿದ್ದರೆ, ಡೀಸೆಲ್ ದರವು ಲೀಟರ್‌ಗೆ 87.96ರಿಂದ 88.20 ರೂ.ಗೆ ಕುಸಿದಿದೆ .ಕಳೆದ ಆರು ತಿಂಗಳುಗಳಲ್ಲಿ ತೈಲ ದರಗಳು ಮಾರ್ಚ್ 24ರಂದು ಮೊದಲ ಬಾರಿಗೆ ಕುಸಿದಿತ್ತು. ತದನಂತರ ವಿಶ್ವದಾದ್ಯಂತ ಕೋವಿಡ್-19 ಎರಡನೆ ಅಲೆಯಿಂದಾಗಿ ತೈಲ ಬಳಕೆಯಲ್ಲಿ ಗಣನೀಯ ಕಡಿತವುಂಟಾದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕಚ್ಚಾ ತೈಲದರಗಳಲ್ಲಿ ಕುಸಿತವುಂಟಾಗಿತ್ತು.
ಒಂದೇ ವಾರದಲ್ಲಿ ಮೂರು ಬಾರಿ ದರ ಕಡಿತದಿಂದಾಗಿ ಪೆಟ್ರೋಲ್ ಬೆಲೆಯು ಪ್ರತಿ ಲೀಟರ್‌ಗೆ 61 ಪೈಸೆ ಹಾಗೂ ಡೀಸೆಲ್ 60 ಪೈಸೆಯಷ್ಟು ಕಡಿತವಾಗಿದೆ.