ಚೀನಾದಿಂದ ಉಯಿಘರ್‌ ಮುಸ್ಲಿಮರ ವಿರುದ್ಧ ಜನಾಂಗೀಯ ಹತ್ಯೆ: ವಾರ್ಷಿಕ ವರದಿಯಲ್ಲಿ ಅಮೆರಿಕದ ವಿದೇಶಾಂಗ ಇಲಾಖೆ ಆರೋಪ

Update: 2021-03-31 17:07 GMT

ವಾಶಿಂಗ್ಟನ್, ಮಾ. 31: ಪಶ್ಚಿಮ ಚೀನಾದ ಕ್ಸಿನ್‌ಜಿಯಾಂಗ್‌ನಲ್ಲಿ ಚೀನಾವು ಮುಸ್ಲಿಮ್ ಉಯಿಘರ್ ಅಸ್ಪಸಂಖ್ಯಾತರ ವಿರುದ್ಧ ‘ಜನಾಂಗೀಯ ಹತ್ಯೆ ಮತ್ತು ಮಾನವತೆ ವಿರುದ್ಧದ ಅಪರಾಧ’ಗಳನ್ನು ಮಾಡುತ್ತಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಆರೋಪಿಸಿದೆ.

ಮಂಗಳವಾರ ಬಿಡುಗಡೆ ಮಾಡಿದ ಜಾಗತಿಕ ಮಾನವಹಕ್ಕುಗಳ ಕುರಿತ ತನ್ನ ವಾರ್ಷಿಕ ವರದಿಯಲ್ಲಿ ಅದು ಈ ಆರೋಪ ಮಾಡಿದೆ.

‘‘ಈ ಒಂದು ವರ್ಷದ ಅವಧಿಯಲ್ಲಿ ಕ್ಸಿನ್‌ಜಿಯಾಂಗ್‌ನಲ್ಲಿರುವ ಮುಸ್ಲಿಮ್ ಉಯಿಘರ್‌ಗಳು ಮತ್ತು ಇತರ ಜನಾಂಗೀಯ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಜನಾಂಗೀಯ ಹತ್ಯೆ ಮತ್ತು ಮಾನವತೆಯ ವಿರುದ್ಧ ಅಪರಾಧಗಳು ನಡೆದಿವೆ’’ ಎಂದು ವರದಿ ಹೇಳಿದೆ.

10 ಲಕ್ಷಕ್ಕೂ ಅಧಿಕ ನಾಗರಿಕರನ್ನು ಕಾನೂನುಬಾಹಿರ ಬಂಧನದಲ್ಲಿಡಲಾಗಿದೆ, ಅವರನ್ನು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ, ಅವರ ಮೇಲೆ ಅತ್ಯಾಚಾರ ನಡೆಸಲಾಗುತ್ತಿದೆ, ಅವರಿಗೆ ಹಿಂಸೆ ನೀಡಲಾಗುತ್ತಿದೆ, ಅವರನ್ನು ಬಲವಂತದ ದುಡಿಮೆಗೆ ಗುರಿಪಡಿಸಲಾಗುತ್ತಿದೆ ಹಾಗೂ ಅವರ ಧಾರ್ಮಿಕ ಸ್ವಾತಂತ್ರ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಚಲನವಲನ ಸ್ವಾತಂತ್ರ್ಯದ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News