"ಉತ್ತಮ ಔಷಧ ತಯಾರಿಕಾ ಮಾನದಂಡಗಳನ್ನು ಅನುಸರಿಸಿಲ್ಲ": ಭಾರತದ ಕೋವ್ಯಾಕ್ಸಿನ್ ಲಸಿಕೆ ತಿರಸ್ಕರಿಸಿದ ಬ್ರೆಝಿಲ್

Update: 2021-03-31 17:17 GMT
ಸಾಂದರ್ಭಿಕ ಚಿತ್ರ

ಬ್ರೆಸೀಲಿಯ (ಬ್ರೆಝಿಲ್), ಮಾ. 31: ಭಾರತದ ಔಷಧ ತಯಾರಿಕಾ ಕಂಪೆನಿ ಭಾರತ್ ಬಯೋಟೆಕ್ ಉತ್ಪಾದಿಸುತ್ತಿರುವ ಕೊರೊನ ವೈರಸ್ ಲಸಿಕೆ ‘ಕೋವ್ಯಾಕ್ಸಿನ್’ ಆಮದಿಗೆ ನೀಡಲಾಗಿದ್ದ ಅನುಮತಿಯನ್ನು ಬ್ರೆಝಿಲ್‌ನ ಆರೋಗ್ಯ ನಿಯಂತ್ರಣ ಪ್ರಾಧಿಕಾರ ಹಿಂದಕ್ಕೆ ಪಡೆದುಕೊಂಡಿದೆ.

ಕೊರೋನ ವೈರಸ್‌ನ ತೀವ್ರ ದಾಳಿಗೆ ಒಳಗಾಗಿರುವ ಬ್ರೆಝಿಲ್, 2 ಕೋಟಿ ಕೋವ್ಯಾಕ್ಸಿನ್ ಲಸಿಕೆಯ ಡೋಸ್‌ಗಳ ಆಮದಿಗೆ ಬೇಡಿಕೆ ಸಲ್ಲಿಸಿತ್ತು.

‘‘ಉತ್ತಮ ಔಷಧ ತಯಾರಿಕಾ ಮಾನದಂಡಗಳನ್ನು ಕಂಪೆನಿಯು ಅನುಸರಿಸಿಲ್ಲ ಎಂಬ ಅಂಶವನ್ನು ಪರಿಗಣಿಸಿ ಕೋವ್ಯಾಕ್ಸಿನ್ ಲಸಿಕೆಯನ್ನು ತಿರಸ್ಕರಿಸಲಾಗಿದೆ’’ ಎಂದು ಬ್ರೆಝಿಲ್ ಸರಕಾರದ ಗಝೆಟ್ ಪ್ರಕಟನೆಯೊಂದು ತಿಳಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಭಾರತ್ ಬಯೋಟೆಕ್, ‘‘ತಪಾಸಣೆಯ ವೇಳೆ ಬ್ರೆಝಿಲ್ ಅಧಿಕಾರಿಗಳು ಬೆಟ್ಟು ಮಾಡಿರುವ ಅಂಶಗಳನ್ನು ಈಡೇರಿಸಲಾಗುವುದು. ಈ ಬಗ್ಗೆ ಬ್ರೆಝಿಲ್ ಆರೋಗ್ಯ ನಿಯಂತ್ರಣ ಪ್ರಾಧಿಕಾರದ ಜೊತೆ ಮಾತುಕತೆ ನಡೆಯುತ್ತಿದೆ. ವಿಷಯವನ್ನು ಶೀಘ್ರವೇ ಇತ್ಯರ್ಥಗೊಳಿಸಲಾಗುವುದು’’ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News