×
Ad

ಟೆಕ್ಸಾಸ್: ಪ್ರಾಥಮಿಕ ಶಾಲೆಗೆ ಭಾರತೀಯ ಅಮೆರಿಕನ್ ಮಹಿಳೆಯ ಹೆಸರು

Update: 2021-03-31 23:19 IST
ಫೋಟೊ ಕೃಪೆ :twitter.com/no1_times

ಹ್ಯೂಸ್ಟನ್ (ಅಮೆರಿಕ), ಮಾ. 31: ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿನ ಪ್ರಾಥಮಿಕ ಶಾಲೆಯೊಂದಕ್ಕೆ ಭಾರತೀಯ ಅಮೆರಿಕನ್ ಮಹಿಳೆ ಸೊನಾಲ್ ಭೂಚರ್‌ರ ಹೆಸರಿಡಲು ಶಾಲೆಯ ಆಡಳಿತ ಮಾಂಡಳಿ ನಿರ್ಧರಿಸಿದೆ. ಸಾಮಾಜಿಕ ಕಾರ್ಯಕರ್ತೆ ಮತ್ತು ದಾನಿಯಾಗಿರುವ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಮನ್ನಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಆಡಳಿತ ಮಂಡಳಿಯು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಶೀಘ್ರದಲ್ಲೇ ಆರಂಭಗೊಳ್ಳಲಿರುವ ಪ್ರಾಥಮಿಕ ಶಾಲೆಗೆ ಭೂಚರ್ ಹೆಸರಿಡುವ ಪ್ರಸ್ತಾವವನ್ನು ಫೋರ್ಟ್ ಬೆಂಡ್ ಇಂಡಿಪೆಂಡೆಂಟ್ ಸ್ಕೂಲ್ ಡಿಸ್ಟ್ರಿಕ್ಟ್‌ನ ಟ್ರಸ್ಟೀಗಳ ಮಂಡಳಿಯು ಅವಿರೋಧವಾಗಿ ಅಂಗೀಕರಿಸಿದೆ.

ಭೂಚರ್ 2019ರಲ್ಲಿ ತನ್ನ 58ನೇ ವರ್ಷದಲ್ಲಿ ಕ್ಯಾನ್ಸರ್‌ನಿಂದಾಗಿ ನಿಧನರಾಗಿದ್ದಾರೆ.

ಪ್ರಾಥಮಿಕ ಶಾಲೆಯು 2023 ಜನವರಿಯಲ್ಲಿ ರಿವರ್‌ಸ್ಟೋನ್ ಸಮುದಾಯದಲ್ಲಿ ಆರಂಭಗೊಳ್ಳಲಿದೆ.

ಮೂಲತಃ ಮುಂಬೈಯವರಾಗಿದ್ದ ಅವರು 1984ರಲ್ಲಿ ಗಂಡನೊಂದಿಗೆ ಅಮೆರಿಕಕ್ಕೆ ವಲಸೆ ಹೋಗಿದ್ದರು. ವೃತ್ತಿಪರ ಫಿಸಿಯೊತೆರಪಿಸ್ಟ್ ಆಗಿದ್ದ ಅವರು ಬಾಂಬೆ ವಿಶ್ವವಿದ್ಯಾನಿಲಯದಿಂದ ಫಿಸಿಯೋತೆರಪಿಯಲ್ಲಿ ಸ್ನಾತಕ ಪದವಿ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News