ಕೊರೋನದಿಂದಾಗಿ ಲಿಂಗ ಸಮಾನತೆಯಲ್ಲಿನ ಪ್ರಗತಿ ದಶಕಗಳಷ್ಟು ಹಿಂದಕ್ಕೆ

Update: 2021-03-31 18:06 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಮಾ. 31: ಪುರುಷರು ಮತ್ತು ಮಹಿಳೆಯರ ನಡುವೆ ಸಮಾನತೆ ತರುವ ನಿಟ್ಟಿನಲ್ಲಿ ವರ್ಷಗಳಿಂದ ಸಾಧಿಸಲಾಗಿರುವ ಪ್ರಗತಿಯನ್ನು ಕೊರೋನ ವೈರಸ್ ಸಾಂಕ್ರಾಮಿಕ ಅಳಿಸಿಹಾಕಿದೆ ಎಂದು ವಿಶ್ವ ಆರ್ಥಿಕ ವೇದಿಕೆಯ ವರದಿಯೊಂದು ಬುಧವಾರ ತಿಳಿಸಿದೆ.

ಕೊರೋನ ವೈರಸ್ ಸಾಂಕ್ರಾಮಿಕವು ಲಿಂಗ ಅಸಮಾನತೆಯನ್ನು ತೊಡೆದು ಹಾಕುವ ಹಾದಿಯನ್ನು ಈಗ ದಶಕಗಳಷ್ಟು ಹಿಂದಕ್ಕೆ ಸರಿಸಿದೆ ಎಂದು ಅದು ಹೇಳಿದೆ.

‘‘ಸಾಂಕ್ರಾಮಿಕವು ಮಹಿಳೆಯರ ಮೇಲೆ ಅನುಪಾತ ಮೀರಿ ಪರಿಣಾಮವನ್ನು ಬೀರಿದೆ. ಮಹಿಳೆಯರು ಪರುಷರಿಗಿಂತಲೂ ಅಧಿಕ ಪ್ರಮಾಣದಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ಅದೂ ಅಲ್ಲದೆ, ಶಾಲೆಗಳು ಮುಚ್ಚಿರುವುದರಿಂದ ಮಕ್ಕಳ ಪಾಲನೆಯ ಹೆಚ್ಚುವರಿ ಹೊರೆಯನ್ನೂ ವಹಿಸಿಕೊಂಡಿದ್ದಾರೆ ಎನ್ನುವುದು ಹಲವು ಅಧ್ಯಯನಗಳಿಂದ ತಿಳಿದು ಬಂದಿದೆ’’ ಎಂದು ವಾರ್ಷಿಕ ‘ಜಾಗತಿಕ ಲಿಂಗ ಅಸಮಾನತೆ’ ವರದಿ ತಿಳಿಸಿದೆ.

ಇದರ ಪರಿಣಾಮವು ದೀರ್ಘಾವಧಿಯಲ್ಲಿ ಕಾಣಿಸಿಕೊಳ್ಳುತ್ತವೆ ಎಂದು ಹೇಳಿರುವ ವರದಿಯು, ಜಗತ್ತಿನಿಂದ ಲಿಂಗ ಅಸಮಾನತೆಯು ಇನ್ನು 135.6 ವರ್ಷಗಳ ಕಾಲ ಹೋಗುವುದಿಲ್ಲ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News