ಮನೆಯಲ್ಲೇ ಮೃತಪಟ್ಟ ಕೊರೋನ ರೋಗಿ ಮೃತದೇಹವನ್ನು ಸಂಬಂಧಿಕರೇ ನಿರ್ವಹಿಸಬೇಕು: ಪುಣೆ ನಗರಾಡಳಿತ

Update: 2021-04-01 16:51 GMT

ಪುಣೆ, ಎ. 1: ಮನೆಯಲ್ಲಿ ಸಾವನ್ನಪ್ಪುವ ಕೊರೋನ ರೋಗಿಗಳ ಮೃತದೇಹವನ್ನು ಸ್ವತಃ ಕುಟುಂಬಿಕರೇ ನಿರ್ವಹಿಸಬೇಕು. ಈ ಪ್ರಕ್ರಿಯೆಯಲ್ಲಿ ನಗರಾಡಳಿತ ಅವರಿಗೆ ನೆರವು ನೀಡಿದೆ ಎಂದು ಪುಣೆ ನಗರಾಡಳಿತ (ಪಿಎಂಸಿ) ಹೇಳಿದೆ.

ಪ್ರತಿ ಪ್ರದೇಶದ ವಾರ್ಡ್ ಅಧಿಕಾರಿಗಳು ಸಂಬಂಧಿಕರಿಗೆ ಮೃತದೇಹ ಒಯ್ಯುವ ಬ್ಯಾಗ್ ಹಾಗೂ 4 ಪಿಪಿಇ ಕಿಟ್‌ಗಳನ್ನು ಒದಗಿಸುತ್ತಾರೆ. ಅವರು ಮೃತದೇಹವನ್ನು ಪ್ಯಾಕ್ ಮಾಡುವಾಗ ಅದನ್ನು ಧರಿಸಬೇಕು ಹಾಗೂ ಮೃತದೇಹ ಸಾಗಿಸುವ ವಾಹನಕ್ಕೆ ಹೇರಿಸಬೇಕು ಎಂದು ಆಡಳಿತ ತಿಳಿಸಿದೆ.

ಶವಸಂಸ್ಕಾರದ ಪಾಸ್ ಪಡೆಯಲು ಪಿಎಂಸಿ ವೆಬ್‌ಸೈಟ್‌ನಲ್ಲಿ ಕೋವಿಡ್ ಸಂಬಂಧಿತ ಕರ್ತವ್ಯಗಳಿಗಾಗಿ ಇರುವ ಅವರ ಇನ್ಸೂರೆನ್ಸ್ ಅರ್ಜಿಯೊಂದಿಗೆ ಸಾವಿಗೆ ನಿಖರ ಕಾರಣವನ್ನು ಸೂಚಿಸುವ ವೈದ್ಯಕೀಯ ಪ್ರಮಾಣ ಪತ್ರವನ್ನು ಅಪ್‌ಲೋಡ್ ಮಾಡೇಕು. ಈ ಪ್ರಕ್ರಿಯೆಯಲ್ಲಿ ಮೃತ ವ್ಯಕ್ತಿಯ ಹಾಗೂ ಮೃತದೇಹವನ್ನು ನಿರ್ವಹಿಸುವ ಸಂಬಂಧಿಕರ ಆಧಾರ ಕಾರ್ಡ್ ಅನ್ನು ಕೂಡ ಸಲ್ಲಿಸಬೇಕು ಎಂದು ಪಿಎಂಸಿಯ ಮುಖ್ಯ ಎಂಜಿನಿಯರ್ ಶ್ರೀನಿವಾಸ್ ಗಂಗಾರಾಮ್ ಕಾಂಡುಲ್ ಹೇಳಿದ್ದಾರೆ. ಸ್ಥಳೀಯ ವಾರ್ಡ್ ಅಧಿಕಾರಿ ಹಾಗೂ ವೈದ್ಯಕೀಯ ಅಧಿಕಾರಿ ಸಾವಿನ ವಿವರಗಳನ್ನು ಇದೇ ಉದ್ದೇಶಕ್ಕಾಗಿ ರೂಪಿಸಲಾದ ಪುಣೆ ನಗರಸಭೆಯ ವ್ಯಾಟ್ಸ್ ಆ್ಯಪ್ ಗುಂಪಿನಲ್ಲಿ ಪೋಸ್ಟ್ ಮಾಡಬೇಕು ಎಂದು ಕಾಂಡುಲ್ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ವಾಹನದಿಂದ ಮೃತದೇಹವನ್ನು ಸ್ಮಶಾನದಲ್ಲಿ ಕೆಳಗೆ ಇಳಿಸುವುದು ಸೇರಿದಂತೆ ಎಲ್ಲ ನಿರ್ವಹಣೆಯನ್ನು ಅಧಿಕಾರಿಗಳು ನಿರ್ವಹಿಸುತ್ತಾರೆ. ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಿದ ಗಂಟೆಗಳ ಬಳಿಕ ಸಂಬಂಧಿಕರು ಬೂದಿಯನ್ನು ಸ್ವೀಕರಿಸಲಿದ್ದಾರೆ. ಸ್ಮಶಾನಕ್ಕೆ 10ಕ್ಕಿಂತ ಹೆಚ್ಚು ಜನರಿಗೆ ತೆರಳುವ ಅವಕಾಶ ಇಲ್ಲ ಎಂದು ಕಾಂಡುಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News