ತಿಂಡಿ ಬಿಲ್ ಪಾವತಿ ವಿಚಾರದಲ್ಲಿ ರಾಜಕೀಯ: ತೇಜಸ್ವಿ ಸೂರ್ಯಗೆ ತಿರುಗೇಟು ನೀಡಿದ ಹೋಟೆಲ್

Update: 2021-04-03 15:45 GMT

ಕೊಯಮತ್ತೂರು: ತಮಿಳುನಾಡು ವಿಧಾನಸಭಾ ಚುನಾವಣೆಯ ಹಿನ್ನೆಯಲ್ಲಿ ರೆಸ್ಟೋರೆಂಟ್‌ ಬಿಲ್‌ ಪಾವತಿ ವಿಚಾರದ ಕುರಿತಾದಂತೆ ರಾಜಕೀಯ ಮಾಡಲು ಹೊರಟ ಸಂಸದ ತೇಜಸ್ವಿ ಸೂರ್ಯಗೆ ಸಾಮಾಜಿಕ ತಾಣದಲ್ಲೇ ರೆಸ್ಟೋರೆಂಟ್‌ ಖಡಕ್‌ ಪ್ರತಿಕ್ರಿಯೆ ನೀಡಿದ ಘಟನೆ ನಡೆದಿದೆ. 

ತಮ್ಮ ಟ್ವಿಟರ್‌ ನಲ್ಲಿ ಗುರುವಾರ ಫೋಟೊ ಪ್ರಕಟಿಸಿದ್ದ ತೇಜಸ್ವಿ ಸೂರ್ಯ "ಇಂದು ಬೆಳಗ್ಗೆ ರೆಸ್ಟೋರೆಂಟ್‌ ನಲ್ಲಿ ಉಪಹಾರದ ಬಳಿಕ ಸಾಮಾನ್ಯವೆಂಬಂತೆ ನಾನು ಹಣ ಪಾವತಿಸಲು ಹೊರಟೆ. ಆದರೆ ಅಲ್ಲಿದ್ದ ಕ್ಯಾಶಿಯರ್‌ ಹಣ ಪಡೆಯಲು ಹಿಂಜರಿಕೆ ತೋರಿದರು. ಬಳಿಕ ಹಿಂಜರಿಕೆಯೊಂದಿಗೆ ಹಣವನ್ನು ಸ್ವೀಕರಿಸಿದರು. ಈ ವೇಳೆ ನಾನು ಅವರೊಂದಿಗೆ ಹೇಳಿದೆ, ʼನಾವು ಬಿಜೆಪಿ ಪಕ್ಷದವರು. ನಮ್ಮ ಪಕ್ಷವು ಎಲ್ಲರನ್ನೂ ಗೌರವಿಸುತ್ತದೆ ಮತ್ತು ರಕ್ಷಿಸುತ್ತದೆ. ಸಣ್ಣ ಸಣ್ಣ ಉದ್ಯಮಗಳಿಂದ ರೋಲ್‌ ಕಾಲ್‌ ಮಾಡಲು ನಾವು ಡಿಎಂಕೆ ಅಲ್ಲ" ಎಂದು ಹೇಳಿದ್ದಾಗಿ ಪೋಸ್ಟ್‌ ಹಾಕಿದ್ದರು.

ಈ ಕುರಿತಾದಂತೆ ಇಂದು ಫೇಸ್‌ ಬುಕ್‌ ನಲ್ಲಿ ಪ್ರತಿಕ್ರಿಯೆ ನೀಡಿರುವ ಅನ್ನಪೂರ್ಣ ರೆಸ್ಟೋರೆಂಟ್‌ "ಡಿಯರ್‌ ತೇಜಸ್ವಿ ಸೂರ್ಯ, ನಮ್ಮ ರೆಸ್ಟೋರೆಂಟ್‌ನಲ್ಲಿ ನಿಮಗೆ ಸೇವೆ ಸಲ್ಲಿಸಿದ್ದಕ್ಕೆ ನಮಗೆ ಸಂತೋಷವಾಗಿದೆ. ಅನ್ನಪೂರ್ಣದಲ್ಲಿ ನಾವು ಎಲ್ಲರನ್ನೂ ಒಂದೇ ರೀತಿಯ ಪ್ರೀತಿ ಮತ್ತು ಕೃತಜ್ಞತೆಯಿಂದ ಸ್ವಾಗತಿಸುತ್ತೇವೆ. ವಾಸ್ತವವಾಗಿ ಪ್ರತಿಯೊಬ್ಬರೂ ತಮ್ಮ ಬಿಲ್‌ಗಳನ್ನು ಪಾವತಿಸಲು ಮುಂದೆ ಬರುತ್ತಾರೆ. ಯಾರೂ ನಮ್ಮನ್ನು ಯಾವುದಕ್ಕೂ ಉಚಿತವಾಗಿ ಒತ್ತಾಯಿಸಲಿಲ್ಲ. ಪ್ರೀತಿ ಮತ್ತು ಗೌರವದ ಸಂಕೇತವಾಗಿ ನಾವು ಕೆಲವೊಮ್ಮೆ ನಮ್ಮ ಸಮಾಜಕ್ಕಾಗಿ ಕೆಲಸ ಮಾಡುವ ಜನರಿಂದ ಹಣವನ್ನು ಪಡೆದುಕೊಳ್ಳುವುದಿಲ್ಲ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.

"ಎಲ್ಲವನ್ನೂ ರಾಜಕೀಯ ದೃಷ್ಟಿಯಿಂದ ನೋಡುವವರಿಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದೀರಿ. ಕೊಯಮತ್ತೂರಿಗೆ ಬಂದಾಗ ನಿಮ್ಮ ರೆಸ್ಟೋರೆಂಟ್‌ ಗೆ ಖಂಡಿತ ಭೇಟಿ ನೀಡುತ್ತೇವೆ" ಎಂದು ಹಲವರು ಕಮೆಂಟ್‌ ಮಾಡಿದ್ದಾರೆ.

Dear Tejasvi Surya we are glad to have served you at our restaurant. At Annapoorna we greet everyone with the same...

Posted by Sree Annapoorna Sree Gowrishankar on Saturday, 3 April 2021

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News