ಪಾಕ್‌ನ ಶಾದಾಬ್ ದಕ್ಷಿಣ ಆಫ್ರಿಕಾ ಸರಣಿಯಿಂದ ಹೊರಕ್ಕೆ

Update: 2021-04-06 04:13 GMT

ಕರಾಚಿ: ಕಾಲ್ಬೆರಳಿಗೆ ಆಗಿರುವ ಗಾಯದಿಂದಾಗಿ ಪಾಕಿಸ್ತಾನದ ಆಲ್‌ರೌಂಡರ್ ಶಾದಾಬ್ ಖಾನ್ ದಕ್ಷಿಣ ಆಫ್ರಿಕಾ ಪ್ರವಾಸ ವಿರುದ್ಧದ ಉಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.

  ನಾಲ್ಕು ವಾರಗಳವರೆಗೆ ತಂಡದ ಸೇವೆಗೆ ಅವರು ಲಭ್ಯರಿಲ್ಲ.

ದಕ್ಷಿಣ ಆಫ್ರಿಕಾ ವಿರುದ್ಧ ರವಿವಾರ ನಡೆದ ಎರಡನೇ ಏಕದಿನ ಪಂದ್ಯದ ವೇಳೆ ಬ್ಯಾಟಿಂಗ್ ಮಾಡುತ್ತಿರುವಾಗ ಅವರ ಕಾಲಿನ ಬೆರಳಿಗೆ ಗಾಯವಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ.

ಶಾದಾಬ್ ತವರಿಗೆ ವಾಪಸಾಗುತ್ತಾರೆಯೇ ಅಥವಾ ತಂಡದೊಂದಿಗೆ ಉಳಿಯುತ್ತಾರೆಯೇ ಎಂದು ಪಿಸಿಬಿ ಉಲ್ಲೇಖಿಸಿಲ್ಲ.

ಎಪ್ರಿಲ್ 7ರಂದು ನಡೆಯುವ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದ ನಂತರ ಪಾಕಿಸ್ತಾನ ಎಪ್ರಿಲ್ 10ರಿಂದ ನಾಲ್ಕು ಪಂದ್ಯಗಳ ಟ್ವೆಂಟಿ -20 ಸರಣಿಯನ್ನು ಆಡಲಿದೆ.

ಕಳೆದ ಎರಡು ವರ್ಷಗಳಿಂದ ಶಾದಾಬ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಮತ್ತು ಝಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕ ವಿರುದ್ಧದ ತವರು ಸರಣಿಯನ್ನು ಕಳೆದುಕೊಂಡ ನಂತರ ಇತ್ತೀಚೆಗೆ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದರು.

ಮುಂದೂಡಲ್ಪಟ್ಟ ಪಿಎಸ್‌ಎಲ್ 6 ಪಂದ್ಯಗಳಲ್ಲಿ ಅವರು ಪುನರಾಗಮನ ಮಾಡಿದರು.

   ಇದಕ್ಕೂ ಮುನ್ನ ಕಳೆದ ನವೆಂಬರ್‌ನಲ್ಲಿ ನ್ಯೂಝಿಲ್ಯಾಂಡ್‌ನಲ್ಲಿ ನಡೆದ ಟ್ವೆಂಟಿ-20ಸರಣಿಯಲ್ಲಿ ಪಾಕಿಸ್ತಾನ ತಂಡದ ನಾಯಕತ್ವ ವಹಿಸಿದ್ದ ಅವರು ಆ ವೇಳೆ ಫಿಟ್‌ನೆಸ್ ಸಮಸ್ಯೆ ಎದುರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News