×
Ad

ಮಹಾರಾಷ್ಟ್ರದಲ್ಲಿ ಒಂದೇ ದಿನ 55,469 ಕೋವಿಡ್-19 ಪ್ರಕರಣಗಳ ವರದಿ

Update: 2021-04-06 22:46 IST

ಮುಂಬೈ: ಮಹಾರಾಷ್ಟ್ರದಲ್ಲಿ ಮಂಗಳವಾರ 55,469 ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ರಾಜ್ಯದ ಸಕ್ರಿಯ ಪ್ರಕರಣವು 4.72 ಲಕ್ಷಕ್ಕೂ ಅಧಿಕವಾಗಿದೆ. ರಾಜ್ಯದಲ್ಲಿ ಪ್ರಸ್ತುತ 4,72,283 ಸಕ್ರಿಯ ಕೋವಿಡ್ -19 ಪ್ರಕರಣಗಳಿವೆ, ಇದು ಭಾರತದಲ್ಲಿ ಅತಿ ಹೆಚ್ಚು.

ಫೆಬ್ರವರಿ ಮಧ್ಯದಿಂದ ಮಹಾರಾಷ್ಟ್ರದಲ್ಲಿ  ದೈನಂದಿನ ಕೋವಿಡ್ -19 ಪ್ರಕರಣಗಳಲ್ಲಿ ಏರಿಕೆ ಕಾಣುತ್ತಿದೆ.  ಆದರೆ ಕಳೆದ ಹದಿನೈದು ದಿನಗಳಲ್ಲಿ ಈ ಅಂಕಿ ಅಂಶಗಳು ತೀವ್ರವಾಗಿ ಏರಿಕೆಯಾಗಲು ಆರಂಭಿಸಿವೆ. ರಾಜ್ಯವು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ ಹಾಗೂ ಈಗ ಪ್ರತಿದಿನ 50,000 ಕ್ಕೂ ಹೆಚ್ಚು ಪ್ರಕರಣಗಳನ್ನು ನಿಯಮಿತವಾಗಿ ವರದಿ ಯಾಗುತ್ತಿದೆ.

ಇತ್ತೀಚಿನ ಕೋವಿಡ್ -19 ಬುಲೆಟಿನ್ ಪ್ರಕಾರ, ಮಹಾರಾಷ್ಟ್ರದಲ್ಲಿ ಮಂಗಳವಾರ ಕೋವಿಡ್ -19 ನಿಂದಾಗಿ 297 ಸಾವುಗಳನ್ನು ದಾಖಲಿಸಿದೆ. ಇದರೊಂದಿಗೆ, ರಾಜ್ಯದ ಒಟ್ಟಾರೆ ಕೋವಿಡ್ -19ನಿಂದಾಗಿರುವ ಸಾವಿನ ಸಂಖ್ಯೆ 56,330 ಕ್ಕೆ ಏರಿದೆ ಹಾಗೂ ಸಾವಿನ ಪ್ರಮಾಣವು ಶೇಕಡಾ 1.81 ಆಗಿದೆ.

ಇದಲ್ಲದೆ, ಮಂಗಳವಾರ 34,256 ರೋಗಿಗಳು ಚೇತರಿಸಿಕೊಂಡಿದ್ದು, ರಾಜ್ಯದಲ್ಲಿ ಒಟ್ಟು ಚೇತರಿಕೆಯ ಸಂಖ್ಯೆ 25,83,331 ಕ್ಕೆ ಏರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News