×
Ad

ಲಸಿಕೆಗಳ ಕೊರತೆಯಿಂದ 70 ವ್ಯಾಕ್ಸಿನ್ ಸೆಂಟರ್ ಸ್ಥಗಿತ, ಜನರಿಂದ ಪ್ರತಿಭಟನೆ

Update: 2021-04-09 14:41 IST
photo: scroll.in 

ಮುಂಬೈ: ಕೋವಿಡ್ ಲಸಿಕೆ ಡೋಸ್ ಗಳ ಕೊರತೆ ಎದುರಿಸುತ್ತಿರುವ ಮುಂಬೈನ 70ಕ್ಕೂ ಅಧಿಕ ವ್ಯಾಕ್ಸಿನ್ ಸೆಂಟರ್ ಗಳನ್ನು ಸ್ಥಗಿತಗೊಳಿಸಲಾಗಿದೆ.

ಮುಂಬೈನ ಅತ್ಯಂತ ಪ್ರಮುಖ ವಾಣಿಜ್ಯ ವಲಯಗಳ ಪೈಕಿ ಒಂದಾಗಿರುವ ಬಿಕೆಸಿಯಲ್ಲಿರುವ ಜಂಬೋ ವ್ಯಾಕ್ಸಿನ್ ಸೆಂಟರ್ ಕೂಡ ಮುಚ್ಚಲ್ಪಟ್ಟಿದೆ. ಸೆಂಟರ್ ಅನ್ನು ಮುಚ್ಚಿರುವುದರಿಂದ ಹೊರಗಡೆ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.

ಮೊದಲ ದಿನದಿಂದ ನಾವು ಲಸಿಕೆಗಳನ್ನು ಬಫರ್ ಸ್ಟಾಕ್ ಆಗಿ ಪಡೆಯುತ್ತಿದ್ದೆವು. ನಿನ್ನೆ ತನಕ ನಾವು ಕೇಂದ್ರಕ್ಕೆ ಸಾಕಷ್ಟುಸಂಖ್ಯೆಯ ಬಾಟಲುಗಳನ್ನು ಪಡೆದಿದ್ದೇವೆ. ನಿನ್ನೆ ರಾತ್ರಿ ಇಂದಿನ ಡೋಸ್ ಗಳನ್ನು ಪಡೆಯುವ ನಿರೀಕ್ಷೆಯಲ್ಲಿದ್ದೆವು. ಆದರೆ ಅದು ಬಂದಿಲ್ಲ. ನಮ್ಮ ಕೇವಲ 160 ಡೋಸ್ ಗಳಿವೆ ಎಂದು ಸೆಂಟರ್ ನ ಡೀನ್ ರಾಜೇಶ್ ದೇರೆ ಹೇಳಿದ್ದಾರೆ.

ಜನರಿಗೆ ಲಸಿಕೆಗಳನ್ನು ನೀಡಲು ಮುಂಬೈನಲ್ಲಿ 120 ಕೇಂದ್ರಗಳನ್ನು ತೆರೆಯಲಾಗಿದೆ. ಬಿಎಂಸಿ ಪ್ರಕಾರ ಸುಮಾರು 71 ಕೇಂದ್ರಗಳಲ್ಲಿ ಲಸಿಕೆ ಕೊರತೆ ಎದುರಾಗಿದೆ.
ಮಹಾರಾಷ್ಟ್ರ ಸರಕಾರವು ಲಸಿಕೆಗಳ ಕೊರತೆಯನ್ನು ಎದುರಿಸುತ್ತಿದ್ದು, ಇದರಿಂದಾಗಿ ಮುಂಬೈ, ಸತಾರ, ಸಾಂಗ್ಲಿ ಹಾಗೂ ಪನ್ವೇಲ್ ನಗರಗಳಲ್ಲಿ ಸೆಂಟರ್ ಗಳನ್ನು ಮುಚ್ಚಲಾಗಿದೆ.

ಮಹಾರಾಷ್ಟ್ರದಲ್ಲಿ ಗುಜರಾತ್ ರಾಜ್ಯಕ್ಕಿಂತ ಎರಡು ಪಟ್ಟು ಜನಸಂಖ್ಯೆ ಇದೆ. ಗುಜರಾತ್‍ಗೆ 1 ಕೋಟಿ ಡೋಸ್ ಗಳು ಹಾಗೂ ನಮಗೂ 1 ಕೋಟಿ ಡೋಸ್ ಗಳನ್ನು ಕೇಂದ್ರ ಸರಕಾರ ನೀಡಿದೆ. ಕೇಂದ್ರದ ತಾರತಮ್ಯ ನೀತಿಯ ವಿರುದ್ಧ ನಾನು ಧ್ವನಿ ಎತ್ತಿದ್ದೇನೆ ಎಂದು ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News