ಪರಿಸರ ಶೃಂಗ ಸಮ್ಮೇಳನವನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇನೆ: ಗ್ರೆಟಾ ಥನ್ಬರ್ಗ್

Update: 2021-04-09 16:57 GMT

ಸ್ಟಾಕ್‌ಹೋಮ್ (ಸ್ವೀಡನ್), ಎ. 8: ಈ ವರ್ಷದ ನವೆಂಬರ್‌ನಲ್ಲಿ ಸ್ಕಾಟ್‌ಲ್ಯಾಂಡ್ ದೇಶದ ಗ್ಲಾಸ್ಗೋ ನಗರದಲ್ಲಿ ನಡೆಯಲಿರುವ ‘ಸಿಒಪಿ26’ ಪರಿಸರ ಶೃಂಗ ಸಮ್ಮೇಳನವನ್ನು ಬಹಿಷ್ಕರಿಸಲು ನಿರ್ಧರಿಸಿರುವುದಾಗಿ ಸ್ವೀಡನ್‌ನ ಹದಿಹರೆಯದ ಪರಿಸರ ಹೋರಾಟಗಾರ್ತಿ ಗ್ರೆಟಾ ತನ್‌ಬರ್ಗ್ ಶುಕ್ರವಾರ ಹೇಳಿದ್ದಾರೆ.

ಜಗತ್ತಿನಾದ್ಯಂತ ಕೋವಿಡ್-19 ಲಸಿಕೆಗಳ ಅಸಮತೋಲಿತ ವಿತರಣೆಯನ್ನು ವಿರೋಧಿಸಿ ಹೀಗೆ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ. ಅಸಮತೋಲಿತ ಲಸಿಕಾ ವಿತರಣೆಯ ಹಿನ್ನೆಲೆಯಲ್ಲಿ, ಎಲ್ಲಾ ದೇಶಗಳಿಗೆ ಸಮಾನ ನೆಲೆಯಲ್ಲಿ ಈ ಸಮ್ಮೇಳನದಲ್ಲಿ ಭಾಗವಹಿಸಲು ಸಾಧ್ಯವಾಗಲಿಕ್ಕಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನವೆಂಬರ್ ವೇಳೆಗೆ ಶ್ರೀಮಂತ ದೇಶಗಳು ತಮ್ಮ ಆರೋಗ್ಯಯುತ ಯುವ ಪೀಳಿಗೆಗೆ ಕೊರೋನ ವೈರಸ್ ಲಸಿಕೆಗಳನ್ನು ನೀಡಲು ಆರಂಭಿಸುತ್ತವೆ. ಆಗ ಜಗತ್ತಿನ ಇತರ ಭಾಗಗಳಲ್ಲಿರುವ ಬಡ ದೇಶಗಳ ಅಪಾಯಕ್ಕೀಡಾಗಿರುವ ಗುಂಪುಗಳು ಲಸಿಕೆಗಳಿಂದ ವಂಚಿತವಾಗುತ್ತವೆ ಎಂದು 18 ವರ್ಷದ ಪರಿಸರ ಹೋರಾಟಗಾರ್ತಿ ಹೇಳಿದ್ದಾರೆ.

‘‘ಅತ್ಯಂತ ಅಸಮತೋಲಿತ ಲಸಿಕೆ ವಿತರಣೆ ಚಾಲ್ತಿಯಲ್ಲಿದೆ. ಇದೇ ವ್ಯವಸ್ಥೆ ಮುಂದುವರಿದರೆ, ಸಿಒಪಿ26 ಪರಿಸರ ಸಮ್ಮೇಳನದಲ್ಲಿ ನಾನು ಭಾಗವಹಿಸುವುದಿಲ್ಲ’’ ಎಂದು ಎಎಫ್‌ಪಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ತನ್‌ಬರ್ಗ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News