ನೈಜೀರಿಯ: ಬಂದೂಕುಧಾರಿಗಳಿಂದ 11 ಸೈನಿಕರ ಹತ್ಯೆ

Update: 2021-04-09 17:01 GMT

 ಅಬುಜ (ನೈಜೀರಿಯ), ಎ. 9: ನೈಜೀರಿಯದ ಬೆನ್ಯೂ ರಾಜ್ಯದಲ್ಲಿ ಬಂದೂಕುಧಾರಿಗಳು 10 ಸೈನಿಕರು ಮತ್ತು ಓರ್ವ ಅಧಿಕಾರಿಯನ್ನು ಕೊಂದಿದ್ದಾರೆ ಎಂದು ಸೇನೆ ಶುಕ್ರವಾರ ತಿಳಿಸಿದೆ.

‘‘ನೈಜೀರಿಯದ ಸೈನಿಕರು ದೈನಂದಿನ ಬೆನ್ಯೂ ರಾಜ್ಯದಲ್ಲಿ ಗಸ್ತು ಕಾರ್ಯಾಚರಣೆಯಲ್ಲಿರುವಾಗ, ಅವರ ಮೇಲೆ ದಾಳಿ ನಡೆಸಲಾಗಿದೆ’’ ಎಂದು ಸೇನಾ ವಕ್ತಾರ ಮುಹಮ್ಮದ್ ಯೆರಿಮ ಹೇಳಿಕೆಯೊಂದರಲ್ಲಿ ತಿಳಿಸಿದರು.

ಹಂತಕರನ್ನು ಪತ್ತೆಹಚ್ಚಲು ಯತ್ನಿಸುತ್ತಿರುವುದಾಗಿ ಸೇನೆ ಹೇಳಿದೆ.

ಮಧ್ಯ ನೈಜೀರಿಯದ ಬೆನ್ಯೂ ರಾಜ್ಯದಲ್ಲಿ ಜಮೀನು, ನೀರು ಮತ್ತು ಸಾಕುಪ್ರಾಣಿಗಳನ್ನು ಮೇಯಿಸುವ ವಿಚಾರದಲ್ಲಿ ವರ್ಷಗಳಿಂದ ರೈತರು ಮತ್ತು ಅಲೆಮಾರಿ ಕುರುಬರ ನಡುವೆ ಮಾರಣಾಂತಿಕ ಸಂಘರ್ಷ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News