ದೇಶದಲ್ಲಿ ಒಂದೇ ದಿನ 1.45 ಲಕ್ಷ ಹೊಸ ಕೊರೋನ ಪ್ರಕರಣ

Update: 2021-04-10 05:43 GMT

ಹೊಸದಿಲ್ಲಿ: ದೇಶದಲ್ಲಿ ಕೊರೋನ ವೈರಸ್ ಕಾಣಿಸಿಕೊಂಡ ಬಳಿಕ ಇದೇ ಮೊದಲ ಬಾರಿ ಒಂದೇ ದಿನ ಗರಿಷ್ಟ ಸೋಂಕಿನ ಪ್ರಕರಣ ಕಂಡುಬಂದಿದ್ದು, ಕಳೆದ 24 ಗಂಟೆಯ ಅವಧಿಯಲ್ಲಿ 1,45,384 ಹೊಸ ಕೊರೋನ ಕೇಸ್ ಗಳು ಪತ್ತೆಯಾಗಿವೆ ಎಂದು ಶನಿವಾರ ಬಿಡುಗಡೆಯಾಗಿರುವ ಸರಕಾರದ ಅಂಕಿ-ಅಂಶದಿಂದ ಬಹಿರಂಗವಾಗಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 794 ಮಂದಿ ಸಾವನ್ನಪ್ಪಿದ್ದಾರೆ. ಕೊರೋನಕ್ಕೆ ಈ ತನಕ ಒಟ್ಟು 1,68,436 ಜನರು ಸಾವನ್ನಪ್ಪಿದ್ದಾರೆ.

ಕೊರೋನದ ಎರಡನೇ ಅಲೆಯಲ್ಲಿ  ಸಕ್ರಿಯ ಕೊರೋನ ಕೇಸ್ ಗಳ ಸಂಖ್ಯೆಯು 10 ಲಕ್ಷ ಗಡಿ ದಾಟಿದೆ. ದೇಶದ ವಿವಿಧ ಭಾಗಗಳಲ್ಲಿ ಕೊರೋನ ಕ್ಷಿಪ್ರವಾಗಿ ಹರಡುತ್ತಿದೆ.

ಭಾರತದಲ್ಲಿ ಇದೀಗ ಸತತ ನಾಲ್ಕನೇ ದಿನ ಕಳೆದ 24 ಗಂಟೆಯಲ್ಲಿ 1 ಲಕ್ಷಕ್ಕೂ ಅಧಿಕ ಕೇಸ್ ಗಳು ದಾಖಲಾಗಿವೆ. ಕಳೆದ ಐದು ದಿನಗಳಲ್ಲಿ 6.6 ಲಕ್ಷಕ್ಕೂ ಅಧಿಕ ಸೋಂಕುಗಳು ಕಂಡುಬಂದಿವೆ. 3,335 ಜನರು ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News