ಹಾಡಹಗಲೇ ನಡು ಬೀದಿಯಲ್ಲಿ ಪತ್ನಿಯನ್ನು ಭೀಕರವಾಗಿ ಇರಿದು ಹತ್ಯೆಗೈದ ಪತಿ

Update: 2021-04-10 13:58 GMT

ಹೊಸದಿಲ್ಲಿ: ದಿಲ್ಲಿ ಮಾರುಕಟ್ಟೆಯೊಂದರಲ್ಲಿ ಶನಿವಾರ ಮಧ್ಯಾಹ್ನ 26 ವರ್ಷದ ಮಹಿಳೆಯನ್ನು ಪತಿಯೇ ಭೀಕರವಾಗಿ ಇರಿದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಗೆ ಅಕ್ರಮ ಸಂಬಂಧವಿದೆ ಎಂಬ ಅನುಮಾನದ ಮೇಲೆ ಆ ವ್ಯಕ್ತಿ 25 ಬಾರಿ ಇರಿದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಯುವ್ಯ ದಿಲ್ಲಿಯ ಬುಧ್ ವಿಹಾರದಲ್ಲಿ ಹರೀಶ್ ಎಂಬಾತ ತನ್ನ ಪತ್ನಿ ನೀಲುವನ್ನು ನಡುರಸ್ತೆಯಲ್ಲಿ ಭೀಭತ್ಸವಾಗಿ ಇರಿದು ಕೊಂದಿರುವ ದೃಶ್ಯವು ಸೆರೆಯಾಗಿದೆ.

ಕೆಲವು ದಾರಿಹೋಕರು ಮಹಿಳೆಯನ್ನು ಉಳಿಸಲು ಪ್ರಯತ್ನಿಸುತ್ತಿದ್ದಂತೆ "ಮುಂದೆ ಬರಲು ಧೈರ್ಯ ಮಾಡಬೇಡ ಎಂದು ವ್ಯಕ್ತಿಯು ಕಿರುಚಾಡುತ್ತಿರುವುದು ಕೇಳಿಬಂದಿದೆ.

ಮದುವೆ ಬ್ಯೂರೋವೊಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News