ಇನ್ನು ವಿಮಾನದಲ್ಲಿ 2 ಗಂಟೆಗೂ ಅಧಿಕ ಸಮಯದ ಪ್ರಯಾಣಕ್ಕೆ ಮಾತ್ರ ಊಟ

Update: 2021-04-12 16:02 GMT

ಹೊಸದಿಲ್ಲಿ, ಎ.12: ಪ್ರಯಾಣದ ಸಂದರ್ಭ ವಿಮಾನದಲ್ಲಿ ಪ್ರಯಾಣಿಕರಿಗೆ ಊಟ ನೀಡುವ ವ್ಯವಸ್ಥೆಗೆ ಸಂಬಂಧಿಸಿದ ಮಾರ್ಗಸೂಚಿಗೆ ತಿದ್ದುಪಡಿ ಮಾಡಲಾಗಿದ್ದು ಎಪ್ರಿಲ್ 15ರಿಂದ 2 ಗಂಟೆಗೂ ಅಧಿಕ ಸಮಯದ ಪ್ರಯಾಣದ ಸಂದರ್ಭದಲ್ಲಿ ಮಾತ್ರ ಊಟ ಒದಗಿಸಲಾಗುವುದು ಎಂದು ನಾಗರಿಕ ವಿಮಾನಯಾನ ಇಲಾಖೆ ಸೋಮವಾರ ಹೇಳಿದೆ.

ಕೊರೋನ ಸೋಂಕಿನ ಸಮಸ್ಯೆ ಹೆಚ್ಚುತ್ತಿರುವುದನ್ನು ಗಮನಿಸಿ, ದೇಶೀಯ ಸೇವೆಯ ವಿಮಾನಗಳಲ್ಲಿ ಊಟದ ವ್ಯವಸ್ಥೆಯ ಬಗ್ಗೆ ಪರಿಶೀಲಿಸಲು ನಿರ್ಧರಿಸಲಾಗಿದೆ. ಎಪ್ರಿಲ್ 15ರಿಂದ 2 ಗಂಟೆಗೂ ಹೆಚ್ಚಿನ ಅವಧಿಯ ಪ್ರಯಾಣದಲ್ಲಿ ಮಾತ್ರ ಊಟದ ವ್ಯವಸ್ಥೆ ಇರುತ್ತದೆ. ಬಳಸಿ ಎಸೆಯುವ ಊಟದ ತಟ್ಟೆಗಳಲ್ಲಿ ಊಟ ನೀಡುವುದು, ಕಾಫಿ, ಚಹಾ ಅಥವಾ ಮದ್ಯಗಳನ್ನೂ ಬಳಸಿ ಎಸೆಯುವ ಲೋಟದಲ್ಲಿ ನೀಡುವುದು ಮುಂತಾದ ಷರತ್ತುಗಳನ್ನು ವಿಧಿಸಲಾಗಿದೆ. ಸಿಬಂದಿಗಳು ಪ್ರತಿಯೊಬ್ಬ ಪ್ರಯಾಣಿಕರಿಗೆ ಊಟ/ಪಾನೀಯ ಸರಬರಾಜು ಮಾಡುವಾಗ ಹೊಸ ಕೈಗವಸು ಬಳಸಬೇಕು ಮತ್ತು ಬದಲಾದ ನಿಯಮಗಳ ಬಗ್ಗೆ ಎಲ್ಲಾ ಪ್ರಯಾಣಿಕರಿಗೆ ಮಾಹಿತಿ ನೀಡಬೇಕು ಎಂದು ಇಲಾಖೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News