ಭಾರತದಲ್ಲಿ ಶೇ. 9.1ರಷ್ಟು ಇಳಿಕೆಯಾದ ತೈಲ ಬಳಕೆ

Update: 2021-04-12 16:24 GMT

ಹೊಸದಿಲ್ಲಿ, ಎ. 8: ಕೋವಿಡ್ ಸಾಂಕ್ರಾಮಿಕ ರೋಗ ಈಗ ವಿವಿಧ ಕ್ಷೇತ್ರಗಳ ಬೇಡಿಕೆ ಸಂಕೋಚನ ಹಾಗೂ ಆರ್ಥಿಕ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಉಂಟು ಮಾಡುತ್ತಿದ್ದು, ಮಾರ್ಚ್ 31ರಂದು ಕೊನೆಗೊಂಡ ವಿತ್ತ ವರ್ಷದಲ್ಲಿ ಭಾರತದ ತೈಲ ಬಳಕೆಯು ಶೇ. 9.1ರಷ್ಟು ಕಡಿಮೆಯಾಗಿದೆ.

ತೈಲ ಬೇಡಿಕೆ ಆರ್ಥಿಕತೆಯ ಆರೋಗ್ಯದ ಪ್ರಮುಖ ಮಾನದಂಡ. ಕೊರೋನ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಲಾಕ್‌ಡೌನ್ ಆರ್ಥಿಕ ಚಟುವಟಿಕೆಯನ್ನು ಕಡಿತಗೊಳಿಸಿರುವುದರಿಂದ ಹಾಗೂ ದೇಶಾದ್ಯಂತ ಸರಕು ಸಾಗಾಟ ಹಾಗೂ ಸೇವೆ ಮೊಟಕುಗೊಂಡಿರುವುದರಿಂದ 2021ನೇ ವಿತ್ತ ವರ್ಷದಲ್ಲಿ ಎರಡು ದಶಕಗಳಲ್ಲೆ ಮೊದಲ ಬಾರಿಗೆ ತೈಲ ಬಳಕೆ ಶೇ. 9.1ರಷ್ಟು ಇಳಿಕೆಯಾಗಿದೆ. ದೇಶದಲ್ಲಿ ಈ ಹಿಂದಿನ ವಿತ್ತ ವರ್ಷದ 21.41 ಕೋಟಿ ಟನ್ ಹೋಲಿಸಿದರೆ, 2020-21 ರಲ್ಲಿ ಒಟ್ಟು ತೈಲೋತ್ಪನ್ನದ ಬಳಕೆ 19.46 ಕೋಟಿ ಟನ್ ಎಂದು ತೈಲ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಹಾಗೂ ವಿಶ್ಲೇಷಣೆ ಘಟಕ (ಪಿಪಿಎಸಿ) ತಿಳಿಸಿದೆ. 1998-99ರಿಂದ ಮೊದಲ ಬಾರಿಗೆ ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ದೇಶದಲ್ಲಿ ಇಳಿಕೆಯಾಗಿದೆ. ಇದು ದೇಶದಲ್ಲಿ ಸಾಂಕ್ರಾಮಿಕ ರೋಗ ಆರ್ಥಿಕತೆಯ ಮೇಲೆ ಬೀರಿದ ಪರಿಣಾಮವನ್ನು ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News