ಮುಖೇಶ್ ಅಂಬಾನಿ ನಿವಾಸದ ಸಮೀಪ ಸ್ಫೋಟಕ ಪತ್ತೆ ಪ್ರಕರಣ: ‘ನಕಲಿ ಎನ್‌ಕೌಂಟರ್’ ಆಯಾಮದಲ್ಲಿ ಎನ್‌ಐಎ ತನಿಖೆ

Update: 2021-04-14 17:12 GMT

ಮುಂಬೈ, ಎ. 14: ಉದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸದ ಸಮೀಪ ಸ್ಫೋಟಕಗಳನ್ನು ತುಂಬಿದ್ದ ಎಸ್‌ಯುವಿ ವಾಹನ ಪತ್ತೆಯಾದ ಪ್ರಕರಣದೊಂದಿಗೆ ನಂಟು ಇದೆ ಎಂದು ಬಿಂಬಿಸಲು ಇಬ್ಬರು ವ್ಯಕ್ತಿಗಳ ನಕಲಿ ಎನ್‌ಕೌಂಟರ್‌ಗೆ ಅಮಾನತುಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಯೋಜನೆ ರೂಪಿಸಿದ್ದರು ಎಂದು ಪ್ರಕರಣದ ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ಈ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ಥಾಣೆ ಸಮೀಪದಲ್ಲಿರುವ ವಾಝೆ ಅವರ ನಿವಾಸದಲ್ಲಿ ಶೋಧ ನಡೆಸುತ್ತಿರುವ ಸಂದರ್ಭ ವ್ಯಕ್ತಿಯೊಬ್ಬರ ಪಾಸ್‌ಪೋರ್ಟ್ ಪತ್ತೆಯಾಗಿದೆ. ಆದರೆ, ಅವರ ಗುರುತು ಬಹಿರಂಗಗೊಂಡಿಲ್ಲ.

ವಾಜೆ ಅವರು ಪಾಸ್‌ಪೋರ್ಟ್ ಹೊಂದಿದ ವ್ಯಕ್ತಿ ಹಾಗೂ ಇನ್ನೋರ್ವ ವ್ಯಕ್ತಿಯನ್ನು ನಕಲಿ ಎನ್‌ಕೌಂಟರ್ ಮೂಲಕ ಹತ್ಯೆಗೈಯಲು ಯೋಜಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಮಹಾರಾಷ್ಟ್ರದ ಔರಂಗಾಬಾದ್‌ನಿಂದ ಕಳೆದ ವರ್ಷ ನವೆಂಬರ್‌ನಲ್ಲಿ ಕಳವುಗೈಯಲಾದ ಮಾರುತಿ ಇಕೋ ವಾಹನದಲ್ಲಿ ಈ ನಕಲಿ ಎನ್‌ಕೌಂಟರ್ ಬಗ್ಗೆ ಪ್ರಾಥಮಿಕ ಯೋಜನೆ ರೂಪಿಸಲಾಗಿತ್ತು.

ಇಬ್ಬರು ವ್ಯಕ್ತಿಗಳನ್ನು ಎನ್‌ಕೌಂಟರ್‌ನಲ್ಲಿ ಹತ್ಯೆಗೈಯುವ ಮೂಲಕ ಸ್ಪೋಟಕ ತುಂಬಿದ ಎಸ್‌ಯುವಿ ವಾಹನ ನಿಲ್ಲಿಸಿದ ಪ್ರಕರಣವನ್ನು ಬಗೆಹರಿಸಲಾಗಿದೆ ಎಂದು ಪ್ರತಿಪಾದಿಸಲು ಹಾಗೂ ಪ್ರಶಂಸೆ ಪಡೆಯಲು ವಾಝೆ ಯೋಜಿಸಿದ್ದರು. ಆದರೆ, ಆ ಯೋಜನೆ ಕಾರ್ಯರೂಪಕ್ಕೆ ಬರಲಿಲ್ಲ ಎಂದು ಎನ್‌ಐಎ ಶಂಕಿಸಿರುವುದಾಗಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News