×
Ad

ಭವಿಷ್ಯದ ವಿಶ್ವ ವ್ಯವಸ್ಥೆಯ ಮೂಲ ಹಿಂದೂ ಮಹಾಸಾಗರ-ಪೆಸಿಫಿಕ್ ವಲಯ: ಐರೋಪ್ಯ ಒಕ್ಕೂಟ

Update: 2021-04-15 21:12 IST

 ಬ್ರಸೆಲ್ಸ್ (ಬೆಲ್ಜಿಯಮ್), ಎ. 15: ಹಲವು ವಿಧಗಳಲ್ಲಿ ಭವಿಷ್ಯದ ವಿಶ್ವ ವ್ಯವಸ್ಥೆಯ ದಾರಿ ಹಿಂದೂ ಮಹಾಸಾಗರ-ಪೆಸಿಫಿಕ್ ವಲಯದಲ್ಲಿ ತೆರೆದುಕೊಳ್ಳುತ್ತದೆ ಎಂದು ಐರೋಪ್ಯ ಒಕ್ಕೂಟ ಸಮಿತಿಯ ಅಧ್ಯಕ್ಷ ಚಾರ್ಲ್ಸ್ ಮೈಕಲ್ ಬುಧವಾರ ಹೇಳಿದ್ದಾರೆ. ಈ ವಲಯವು ಈಗ ಜಾಗತಿಕ ಆರ್ಥಿಕ ಮತ್ತು ರಾಜಕೀಯ ಮಹತ್ವದ ಕೇಂದ್ರವಾಗಿ ಪರಿವರ್ತನೆಯಾಗಿದ್ದು, ಭವಿಷ್ಯದಲ್ಲಿ ಜಾಗತಿಕ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವ ಎಲ್ಲ ಸಾಮರ್ಥ್ಯವನ್ನು ಹೊಂದಿದೆ ಎಂದು ‘ರೈಸಿನಾ ಮಾತುಕತೆ’ ಎಂಬ ಆನ್‌ಲೈನ್ ಸಮಾವೇಶದಲ್ಲಿ ಮಾತನಾಡುತ್ತಾ ಅವರು ಅಭಿಪ್ರಾಯಪಟ್ಟರು.

ಭಾರತದೊಂದಿಗಿನ ಭಾಗೀದಾರಿಕೆಯು ಐರೋಪ್ಯ ಒಕ್ಕೂಟದ ‘ಭೌಗೋಳಿಕ-ರಾಜಕೀಯ’ ತಂತ್ರಗಾರಿಕೆಯ ಪ್ರಮುಖ ಅಂಶವಾಗಿದೆ ಎಂದು ಹೇಳಿದ ಅವರು, ಬಾಂಧವ್ಯವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಒಕ್ಕೂಟವು ದೃಢನಿರ್ಧಾರ ಮಾಡಿದೆ ಎಂದರು.

‘‘ಹಿಂದೂ ಮಹಾಸಾಗರ-ಪೆಸಿಫಿಕ್ ವಲಯದ ಸ್ವಾತಂತ್ರ್ಯ, ಮುಕ್ತಾವಕಾಶ ಮತ್ತು ಸ್ಥಿರತೆಯಲ್ಲಿ ನಮಗೆ ತುಂಬಾ ಮುಖ್ಯವಾಗಿದೆ. ಐರೋಪ್ಯ ಒಕ್ಕೂಟವು ಮೊದಲ ಬಾರಿಗೆ ಈ ವಲಯಕ್ಕೆ ಸಂಬಂಧಿಸಿ ಸಮಗ್ರ ಹಾಗೂ ವ್ಯೂಹಾತ್ಮಕ ನಿಲುವೊಂದನ್ನು ತೆಗೆದುಕೊಳ್ಳುವುದು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News