ಅಮೆರಿಕದಿಂದ 10 ರಶ್ಯ ರಾಜತಾಂತ್ರಿಕರ ಉಚ್ಚಾಟನೆ; ಆರ್ಥಿಕ ದಿಗ್ಬಂಧನ

Update: 2021-04-15 16:58 GMT

ವಾಶಿಂಗ್ಟನ್, ಎ. 15: ಅಮೆರಿಕ ಗುರುವಾರ ರಶ್ಯ ವಿರುದ್ಧ ಹೊಸ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿದೆ ಹಾಗೂ 10 ರಾಜತಾಂತ್ರಿಕರನ್ನು ಉಚ್ಚಾಟಿಸಿದೆ. ರಶ್ಯವು ಅಮೆರಿಕದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿರುವುದಕ್ಕೆ, ಬೃಹತ್ ಸೈಬರ್ ದಾಳಿ ನಡೆಸಿರುವುದಕ್ಕೆ ಹಾಗೂ ಇತರ ಪ್ರತಿಕೂಲ ಚಟುವಟಿಕೆಗಳಲ್ಲಿ ತೊಡಗಿರುವುದಕ್ಕೆ ಪ್ರತೀಕಾರವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ.

ರಶ್ಯ ಸರಕಾರಕ್ಕೆ ಸಾಲ ನೀಡುತ್ತಿರುವ ಅಮೆರಿಕದ ಬ್ಯಾಂಕ್‌ಗಳ ಮೇಲಿನ ನಿರ್ಬಂಧವನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ವಿಸ್ತರಿಸಿದ್ದಾರೆ, ಬೇಹುಗಾರರು ಎಂಬುದಾಗಿ ಭಾವಿಸಲಾಗಿರುವ ವ್ಯಕ್ತಿಗಳು ಸೇರಿದಂತೆ 10 ರಾಜತಾಂತ್ರಿಕರನ್ನು ಉಚ್ಚಾಟಿಸಿದ್ದಾರೆ ಹಾಗೂ 2020ರ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಲು ಪ್ರಯತ್ನಿಸಿದರೆನ್ನಲಾದ 32 ವ್ಯಕ್ತಿಗಳ ವಿರುದ್ಧ ದಿಗ್ಬಂಧನಗಳನ್ನು ವಿಧಿಸಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News