ಹೂಗ್ಲಿ: ದೇವಾಲಯದಲ್ಲಿ ದಲಿತರಿಗೆ ಪ್ರವೇಶ ನಿರಾಕರಣೆ; ಆರೋಪ

Update: 2021-04-15 18:04 GMT

ಹೂಗ್ಲಿ (ಪಶ್ಚಿಮ ಬಂಗಾಳ), ಎ. 15: ತಮ್ಮ ಬಗ್ಗೆ ತಾರತಮ್ಯ ಎಸಗಲಾಗುತ್ತಿದೆ ಹಾಗೂ ದೇವಾಲಯ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಗುತ್ತಿದೆ ಎಂದು ಹೂಗ್ಲಿ ಜಿಲ್ಲೆಯ ಆರಂಭಾಗ್ ಉಪ ವಿಭಾಗದ ಗೋಘಾಟ್ ಗ್ರಾಮದ ದಲಿತ ಸಮುದಾಯ ಆರೋಪಿಸಿದೆ.

ವಿವಿಧ ಆಚರಣೆಗಳ ಸಂದರ್ಭ ಇತರ ಸಮುದಾಯಗಳಂತೆ ನಾವು ಕೂಡ ದೇಣಿಗೆ ನೀಡುತ್ತಿದ್ದೇವೆ. ಆದರೆ, ಆಚರಣೆಗಳಲ್ಲಿ ಭಾಗವಹಿಸಲು ಅವಕಾಶ ನೀಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.

‘ನೀಲ್ ಷಷ್ಠಿ ಪೂಜೆ’ ಸಂದರ್ಭ ಮಹಿಳೆಯರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಗುತ್ತಿದೆ ಎಂದು ಕೂಡ ಅವರು ಆರೋಪಿಸಿದ್ದಾರೆ. 150ಕ್ಕೂ ಅಧಿಕ ಜನರನ್ನು ಒಳಗೊಂಡ 25 ಕುಟುಂಬಗಳು ಗೋಘಾಟ್ನಲ್ಲಿ ವಾಸಿಸುತ್ತಿದ್ದು, ಸಂಪ್ರದಾಯದ ತಾರತಮ್ಯಕ್ಕೆ ಬಲಿಪಶುವಾಗಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News