ಕೊಹ್ಲಿಗೆ ವಿಸ್ಡನ್ ಅಲ್ಮನಾಕ್ ಅವರ ಏಕದಿನ ಕ್ರಿಕೆಟಿಗ ಪ್ರಶಸ್ತಿ

Update: 2021-04-16 03:40 GMT

 ಲಂಡನ್: ಭಾರತದ ನಾಯಕ ವಿರಾಟ್ ಕೊಹ್ಲಿ 2010ರ ದಶಕದ ವಿಸ್ಡನ್ ಅಲ್ಮನಾಕ್ ಏಕದಿನ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

  ಇದೇ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್‌ಗೆ 1990ರ ದಶಕದ ಮತ್ತು ಮಾಜಿ ನಾಯಕ ಕಪಿಲ್ ದೇವ್‌ಗೆ 1980ರ ದಶಕದ ಏಕದಿನ ಕ್ರಿಕೆಟಿಗ ಗೌರವ ಸಂದಿವೆ. ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ‘ವರ್ಷದ ಕ್ರಿಕೆಟಿಗ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

2008 ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ 32ರ ಹರೆಯದ ಕೊಹ್ಲಿ ಅವರು ಸಾರ್ವಕಾಲಿಕ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ ಮತ್ತು 254 ಏಕದಿನ ಪಂದ್ಯಗಳಿಂದ 12,169 ರನ್ ಗಳಿಸಿದ್ದಾರೆ.

 ಮೊದಲ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದ 50ನೇ ವಾರ್ಷಿಕೋತ್ಸವದ ನೆನಪಿಗಾಗಿ ವಿಸ್ಡನ್‌ಕ್ರಿಕೆಟಿಗರ್ ಅಲ್ಮನಾಕ್‌ನ 2021ರ ಆವೃತ್ತಿಯಲ್ಲಿ ಕಳೆದ ದಶಕದ ಐದು ಏಕದಿನ ಕ್ರಿಕೆಟಿಗರನ್ನು ಹೆಸರಿಸಲಾಗಿದೆ.ಈ ವಿಚಾರವನ್ನು ವಿಸ್ಡನ್ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ವಿಸ್ಡನ್ ಪುಸ್ತಕವನ್ನು ಸಾಮಾನ್ಯವಾಗಿ ಬೈಬಲ್ ಆಫ್ ಕ್ರಿಕೆಟ್ ಎಂದು ಕರೆಯಲಾಗುತ್ತದೆ. 1971 ಮತ್ತು 2021ರ ನಡುವಿನ ಪ್ರತಿ ದಶಕದಲ್ಲಿ ಒಬ್ಬ ಕ್ರಿಕೆಟಿಗನನ್ನು ಹೆಸರಿಸಲಾಗಿದೆ, ಭಾರತದ ನಾಯಕ ವಿರಾಟ್ ಕೊಹ್ಲಿ 2010 ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ಎಂದು ವಿಸ್ಡನ್‌ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. 2011ರ ವಿಶ್ವಕಪ್ ವಿಜೇತ ಭಾರತೀಯ ತಂಡದ ಸದಸ್ಯರಾಗಿದ್ದ ಕೊಹ್ಲಿ ಅವರು 10 ವರ್ಷಗಳ ಅವಧಿಯಲ್ಲಿ 11,000ಕ್ಕೂ ಹೆಚ್ಚು ರನ್ ಗಳಿಸಿದರು, ಸರಾಸರಿ 60 ಕ್ಕಿಂತ ಹೆಚ್ಚು ಮತ್ತು 42 ಶತಕಗಳನ್ನು ಗಳಿಸಿದ್ದಾರೆ.    

ಸಚಿನ್ ತೆಂಡುಲ್ಕರ್ ಭಾರತ ಕ್ರಿಕೆಟ್ ತಂಡದ ಓಪನರ್ ಆಗಿದ್ದರು. ಅವರು 1998ರಲ್ಲಿ 9 ಏಕದಿನ ಶತಕಗಳನ್ನು ಗಳಿಸಿದರು. ಒಂದೇ ಕ್ಯಾಲೆಂಡರ್ ವರ್ಷದಲ್ಲಿ ರನ್ ಗಳಿಕೆಯಲ್ಲಿ ಇತರ ಬ್ಯಾಟ್ಸ್‌ಮನ್‌ಗಳನ್ನು ಮೀರಿಸಿದ್ದರು. ಭಾರತದ ವಿಶ್ವಕಪ್ ವಿಜೇತ ಮಾಜಿ ನಾಯಕ ಕಪಿಲ್ ದೇವ್ 1983ರಲ್ಲಿ ಭಾರತಕ್ಕೆ ಮೊದಲ ಬಾರಿ ವಿಶ್ವಕಪ್ ತಂದುಕೊಟ್ಟಿದ್ದರು. ಅವರು 1980ರ ದಶಕದಲ್ಲಿ ಅತ್ಯಧಿಕ ವಿಕೆಟ್‌ಗಳನ್ನು ಪಡೆದರು ಮತ್ತು 1,000 ಕ್ಕೂ ಹೆಚ್ಚು ರನ್ ಗಳಿಸಿದರು.

  ಸ್ಟೋಕ್ಸ್ ಸತತ ಎರಡನೇ ವರ್ಷ ‘ವಿಶ್ವದ ಪ್ರಮುಖ ಕ್ರಿಕೆಟಿಗ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News