3ನೇ ಕೊರೋನ ಲಸಿಕೆ ಡೋಸ್ ಕೊಡಬೇಕಾಗಬಹುದು: ಫೈಝರ್

Update: 2021-04-16 15:56 GMT

ವಾಶಿಂಗ್ಟನ್, ಎ. 16: ಫೈಝರ್ ಕಂಪೆನಿಯ ಕೊರೋನ ಲಸಿಕೆ ಹಾಕಿಸಿಕೊಂಡವರಿಗೆ ಆರರಿಂದ 12 ತಿಂಗಳ ಅವಧಿಯಲ್ಲಿ ಮೂರನೇ ಡೋಸ್ ಕೊಡಬೇಕಾಗಬಹುದು ಎಂದು ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಲ್ಬರ್ಟ್ ಬೋರ್ಲಾ ಹೇಳಿದ್ದಾರೆ.

ಕೊರೋನ ವೈರಸ್ ವಿರುದ್ಧ ವರ್ಷಕ್ಕೊಮ್ಮೆ ಲಸಿಕೆ ನೀಡಬೇಕಾದ ಸಂದರ್ಭವೂ ಬರಬಹುದು ಎಂದು ಗುರುವಾರ ಪ್ರಸಾರವಾದ ಸಂದರ್ಶನವೊಂದರಲ್ಲಿ ಅವರು ಅಭಿಪ್ರಾಯಪಟ್ಟರು.

‘‘ಕೊರೋನ ಲಸಿಕೆ ನೀಡಿದ ಮೇಲೆ ಮುಂದೇನು ಎನ್ನುವುದನ್ನು ನಾವು ನೋಡಬೇಕಾಗಿದೆ ಹಾಗೂ ಎಷ್ಟು ಸಲ ಅದನ್ನು ನೀಡಬೇಕು ಎನ್ನುವುದನ್ನೂ ಪರಿಶೀಲಿಸಬೇಕಾಗಿದೆ’’ ಎಂದು ಸಿಎನ್‌ಬಿಸಿಗೆ ನೀಡಿದ ಸಂದರ್ಶನದಲ್ಲಿ ಬೋರ್ಲಾ ಹೇಳಿದರು.

‘‘ಸಂಭಾವ್ಯ ಸಾಧ್ಯತೆಯೆಂದರೆ ವ್ಯಕ್ತಿಯೊಬ್ಬರಿಗೆ ಮೂರನೇ ಡೋಸನ್ನು ಕೊಡಬೇಕಾಗಬಹುದು. ಹಾಗೂ ಅದನ್ನು ಆರರಿಂದ ಹನ್ನೆರಡು ತಿಂಗಳ ಅವಧಿಯಲ್ಲಿ ಕೊಡಬೇಕಾಗಬಹುದು. ಆ ಬಳಿಕ, ಪ್ರತಿ ವರ್ಷ ಲಸಿಕೆ ನೀಡಬೇಕಾಗಬಹುದು. ಆದರೆ, ಈ ಎಲ್ಲ ಸಂಗತಿಗಳು ಇನ್ನಷ್ಟೇ ಖಚಿತಪಡಬೇಕಾಗಿವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News