‘ಸ್ಪೂಟ್ನಿಕ್ v' ರ ಮೊದಲ ಬ್ಯಾಚ್ ಈ ತಿಂಗಳಲ್ಲಿ ಭಾರತಕ್ಕೆ

Update: 2021-04-16 16:04 GMT

ಮಾಸ್ಕೋ (ರಶ್ಯ), ಎ. 16: ರಶ್ಯದ ಕೋವಿಡ್-19 ಲಸಿಕೆ ‘ಸ್ಪೂಟ್ನಿಕ್ v' ರ ಮೊದಲ ಬ್ಯಾಚನ್ನು ಎಪ್ರಿಲ್‌ನಲ್ಲಿ ಭಾರತಕ್ಕೆ ಪೂರೈಸಲಾಗುವುದು ಎಂದು ರಶ್ಯಕ್ಕೆ ಭಾರತದ ರಾಯಭಾರಿ ಬಾಲ ವೆಂಕಟೇಶ್ ವರ್ಮ ಗುರುವಾರ ಹೇಳಿದ್ದಾರೆ.

‘‘ಈ ತಿಂಗಳಲ್ಲಿ ಲಸಿಕೆಯನ್ನೊಳಗೊಂಡ ಮೊದಲ ಸರಕು ಭಾರತವನ್ನು ತಲುಪುತ್ತದೆ ಎಂದು ಲಸಿಕೆ ತಯಾರಿಕಾ ಕಂಪೆನಿ ತಿಳಿಸಿದೆ. ಬಳಿಕ, ಮೇ ತಿಂಗಳಲ್ಲಿ ಭಾರತದಲ್ಲಿ ಲಸಿಕೆಯ ಉತ್ಪಾದನೆ ಆರಂಭಗೊಳ್ಳುತ್ತದೆ ಹಾಗೂ ನಿಧಾನವಾಗಿ ಉತ್ಪಾದನಾ ಸಾಮರ್ಥ್ಯ ಹೆಚ್ಚುತ್ತದೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬಾಲ ವೆಂಕಟೇಶ್ ಹೇಳಿದ್ದಾರೆ ಎಂದು ರಶ್ಯದ ಸುದ್ದಿ ಸಂಸ್ಥೆ ಸ್ಪೂಟ್ನಿಕ್ v ವರದಿ ಮಾಡಿದೆ.

ಭಾರತದಲ್ಲಿ ಸ್ಪೂಟ್ನಿಕ್ v ಲಸಿಕೆ ಉತ್ಪಾದನೆಯ ಹಂತಹಂತವಾಗಿ ಏರಿಸಲಾಗುವುದು ಹಾಗೂ ಒಂದು ಹಂತದಲ್ಲಿ ಉತ್ಪಾದನೆಯು ತಿಂಗಳಿಗೆ 5 ಕೋಟಿ ಡೋಸ್ ಮೀರುವುದು ಎಂದು ಬಾಲ ವೆಂಕಟೇಶ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News