ಮ್ಯಾನ್ಮಾರ್‌ನಲ್ಲಿ ‘ತೆರೆಮರೆಯ ಸರಕಾರ’ ರಚಿಸಿದ ‘ತೆರೆಮರೆಯ ಸಂಸತ್ತು’!

Update: 2021-04-16 16:19 GMT

ಯಾಂಗನ್ (ಮ್ಯಾನ್ಮಾರ್), ಎ. 16: ಮ್ಯಾನ್ಮಾರ್‌ನ ಸೇನಾ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸುವುದಕ್ಕಾಗಿ ‘ಅಡಗಿಕೊಂಡು’ ಕೆಲಸ ಮಾಡುತ್ತಿರುವ ‘ಸಂಸತ್ತು’, ಹೊಸದಾಗಿ ತೆರೆಮರೆಯ ಸರಕಾರವೊಂದನ್ನು ರಚಿಸಿರುವುದಾಗಿ ಶುಕ್ರವಾರ ಘೋಷಿಸಿದೆ. ಪದಚ್ಯುತ ನಾಯಕಿ ಆಂಗ್ ಸಾನ್ ಸೂ ಕಿ ನೂತನ ತೆರೆಮರೆಯ ಸರಕಾರದ ಮುಖ್ಯಸ್ಥೆಯಾಗಿರುತ್ತಾರೆ ಹಾಗೂ ದೇಶದ ಜನಾಂಗೀಯ ಅಲ್ಪಸಂಖ್ಯಾತ ರಾಜಕಾರಣಿಗಳು ಸರಕಾರದಲ್ಲಿದ್ದಾರೆ.

ಹೆಚ್ಚಾಗಿ ಸೂ ಕಿ ಪಕ್ಷದ ಸಂಸದರಿಂದಲೇ ತುಂಬಿರುವ ಗುಂಪು ‘ಕಮಿಟಿ ರೆಪ್ರೆಸೆಂಟಿಂಗ್ ಪ್ಯಿಡಾಂಗ್ಸು ಹಲುಟಾವ್ (ಸಿಆರ್‌ಪಿಎಚ್)’ ಶುಕ್ರವಾರ ತೆರೆಮರೆಯ ಸರಕಾರವನ್ನು ಘೋಷಿಸಿದೆ.

‘ರಾಷ್ಟ್ರೀಯ ಏಕತಾ ಸರಕಾರ’ ಎಂಬುದಾಗಿ ಕರೆಯಲ್ಪಡುವ ತೆರೆಮರೆಯ ಸರಕಾರದ ನೇತೃತ್ವವನ್ನು ಸೂ ಕಿ ವಹಿಸುತ್ತಾರೆ. ಅವರು ಸರಕಾರದ ಸಲಹೆಗಾರ್ತಿಯ ಹುದ್ದೆಯನ್ನು ವಹಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News