ಟುನೀಸಿಯ ಕರಾವಳಿಯಲ್ಲಿ ವಲಸಿಗರ ದೋಣಿ ಮುಳುಗಿ ಕನಿಷ್ಠ 21 ಸಾವು

Update: 2021-04-16 16:24 GMT
ಸಾಂದರ್ಭಿಕ ಚಿತ್ರ

ಟ್ಯೂನಿಸ್ (ಟ್ಯುನೀಸಿಯ), ಎ. 16: ವಲಸಿಗರನ್ನು ಹೊತ್ತ ದೋಣಿಯೊಂದು ಟ್ಯುನೀಸಿಯ ಕರಾವಳಿಯಲ್ಲಿ ಗುರುವಾರ ಮುಳುಗಿದಾಗ ಕನಿಷ್ಠ 21 ಮಂದಿ ಮೃತಪಟ್ಟಿದ್ದಾರೆ ಎಂದು ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ವಲಸಿಗರು ಇಟಲಿಯ ದ್ವೀಪ ಲಾಂಪೆಡುಸ ತಲುಪುವುದಕ್ಕಾಗಿ ಮೆಡಿಟರೇನಿಯನ್ ಸಮುದ್ರವನ್ನು ದಾಟುತ್ತಿದ್ದರು.

‘‘ವಲಸಿಗರನ್ನು ಹೊತ್ತ ದೋಣಿಯು ಗುರುವಾರ ತಡ ರಾತ್ರಿ ಸ್ಫಾಕ್ಸ್ ಎಂಬಲ್ಲಿಂದ ಹೊರಟಿತು. ಅದು ಸಮುದ್ರದಲ್ಲಿ ಮುಳುಗಿದ್ದು, ಈವರೆಗೆ ತಟರಕ್ಷಣಾ ಪಡೆಯ ಸಿಬ್ಬಂದಿ 21 ಮೃತದೇಹಗಳನ್ನು ಪತ್ತೆಹಚ್ಚಿದ್ದಾರೆ. ಶೋಧ ಕಾರ್ಯ ಮುಂದುವರಿದಿದೆ’’ ಎಂದು ಟ್ಯುನೀಸಿಯದ ಸಿವಿಲ್ ಪ್ರೊಟೆಕ್ಷನ್ ಸರ್ವಿಸ್‌ನ ನಿರ್ದೇಶಕರು ಶುಕ್ರವಾರ ‘ರಾಯ್ಟರ್ಸ್’ಗೆ ತಿಳಿಸಿದ್ದಾರೆ.

ಗುಂಡು ಹಾರಾಟ ನಡೆದಿರುವ ಇಂಡಿಯಾನಪೊಲಿಸ್ ನಗರದ ಫೆಡೆಕ್ಸ್ ಕಂಪೆನಿಯ ಹೊರಗಿನ ದೃಶ್ಯ.

ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಟ್ಯುನೀಸಿಯ ತಟರಕ್ಷಣಾ ಪಡೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News