ಮ್ಯಾಕ್ಸ್ ವೆಲ್, ಡಿವಿಲಿಯರ್ಸ್ ಆಕರ್ಷಕ ಆಟ: ಸತತ ಮೂರನೇ ಗೆಲುವು ದಾಖಲಿಸಿದ ಆರ್​ಸಿಬಿ

Update: 2021-04-18 14:25 GMT

ಚೆನ್ನೈ: ಗ್ಲೆನ್ ಮ್ಯಾಕ್ಸ್ ವೆಲ್(78, 49 ಎಸೆತ) ಹಾಗೂ  ಎಬಿಡಿ ವಿಲಿಯರ್ಸ್ (ಔಟಾಗದೆ 76, 34 ಎಸೆತ)ಅರ್ಧಶತಕಗಳ ಕೊಡುಗೆ ಕೈಲ್ ಜಮೀಸನ್(3-41) ನೇತೃತ್ವದ ಬೌಲಿಂಗ್ ದಾಳಿಯ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ ಟೂರ್ನಿಯ 10ನೇ ಪಂದ್ಯವನ್ನು 38 ರನ್ ಗಳ ಅಂತರದಿಂದ ಗೆದ್ದುಕೊಂಡಿದೆ.

ವಿರಾಟ್ ಕೊಹ್ಲಿ ಬಳಗ ಸತತ ಮೂರನೇ ಪಂದ್ಯವನ್ನು ಜಯಿಸಿ ಹ್ಯಾಟ್ರಿಕ್ ಸಾಧಿಸಿತು. ಇದೇ ಮೊದಲ ಬಾರಿ ಐಪಿಎಲ್ ಋತುವಿನ ಮೊದಲ 3 ಪಂದ್ಯಗಳನ್ನು ಜಯಿಸಿದೆ. ಆರು ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ವಾಪಸಾಗಿದೆ.

ರವಿವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆರ್ ಸಿಬಿ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿತು.

ಗೆಲ್ಲಲು 205 ರನ್ ಕಠಿನ ಗುರಿ ಬೆನ್ನಟ್ಟಿದ ಕೆಕೆಆರ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿದೆ. ಕೆಕೆಆರ್ ಪರ  ಆ್ಯಂಡ್ರೆ ರಸೆಲ್(31) ಅಗ್ರ ಸ್ಕೋರರ್ ಎನಿಸಿಕೊಂಡರು. ನಾಯಕ ಇಯಾನ್ ಮೊರ್ಗನ್ (29), ಶಾಕಿಬ್ ಅಲ್ ಹಸನ್(26), ರಾಹುಲ್ ತ್ರಿಪಾಠಿ(25), ಶುಭಂ ಗಿಲ್(21) ಹಾಗೂ ನಿತಿಶ್ ರಾಣಾ(18)ಎರಡಂಕೆಯ ಸ್ಕೋರ್ ಗಳಿಸಿದರು.

ಆರ್ ಸಿಬಿಯ ಪರವಾಗಿ ಜಮೀಸನ್(3-41) ಯಶಸ್ವಿ ಬೌಲರ್ ಎನಿಸಿಕೊಂಡರು. ಹರ್ಷಲ್ ಪಟೇಲ್(2-17), ಯಜುವೇಂದ್ರ ಚಹಾಲ್ (2-34),ತಲಾ ಎರಡು ವಿಕೆಟ್ ಗಳನ್ನು ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News