ದಿಲ್ಲಿಗೆ ಕೊಡಬೇಕಿದ್ದ ವೈದ್ಯಕೀಯ ಆಮ್ಲಜನಕ ಕಡಿತಗೊಳಿಸಿ ಬೇರೆ ರಾಜ್ಯಕ್ಕೆ ನೀಡಲಾಗಿದೆ: ಕೇಜ್ರಿವಾಲ್ ಆರೋಪ

Update: 2021-04-18 16:04 GMT

ಹೊಸದಿಲ್ಲಿ: ಕೇಂದ್ರ ಸರಕಾರವು ದಿಲ್ಲಿಗೆ ಮೀಸಲಾಗಿದ್ದ ವೈದ್ಯಕೀಯ ಆಮ್ಲಜನಕದ ಪ್ರಮಾಣವನ್ನು ಕಡಿಮೆಗೊಳಿಸಿದೆ ಹಾಗೂ ಅದನ್ನು ಇತರ ರಾಜ್ಯಗಳಿಗೆ ಕಳುಹಿಸಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರವಿವಾರ ಆರೋಪಿಸಿದ್ದಾರೆ.

ದಿಲ್ಲಿಗೆ ಮೀಸಲಾದ 140 ಮೆಟ್ರಿಕ್ ಟನ್ ಆಮ್ಲಜನಕವನ್ನು ಇತರ ರಾಜ್ಯಗಳಿಗೆ ಕಳುಹಿಸಲಾಗಿದ್ದು, ಅದನ್ನು ನಮಗೆ ನೀಡಬೇಕು ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಗೆ ಕೇಜ್ರಿವಾಲ್ ಪತ್ರ ಬರೆದಿದ್ದಾರೆ.

ರಾಷ್ಟ್ರ ರಾಜಧಾನಿಯು ಆಮ್ಲಜನಕದ ತೀವ್ರ ಕೊರತೆಯನ್ನು ಎದುರಿಸುತ್ತಿದೆ ಹಾಗೂ ಈ ವಿಷಯವು "ತುರ್ತುಸ್ಥಿತಿ" ಯಾಗಿ ಮಾರ್ಪಟ್ಟಿದೆ ಎಂದು ಅವರು ಹೇಳಿದರು.

"ಡೆಲ್ ತೀವ್ರ ಆಮ್ಲಜನಕದ ಕೊರತೆಯನ್ನು ಎದುರಿಸುತ್ತಿದೆ. ತೀವ್ರವಾಗಿ ಹೆಚ್ಚುತ್ತಿರುವ ಪ್ರಕರಣಗಳ ದೃಷ್ಟಿಯಿಂದ, ಡೆಲ್ ಸಾಮಾನ್ಯ ಪೂರೈಕೆಗಿಂತ ಹೆಚ್ಚಿನದನ್ನು ಬಯಸುತ್ತದೆ. ಪೂರೈಕೆಯನ್ನು ಹೆಚ್ಚಿಸುವ ಬದಲು, ನಮ್ಮ ಸಾಮಾನ್ಯ ಪೂರೈಕೆಯನ್ನು ತೀವ್ರವಾಗಿ ಕಡಿಮೆ ಮಾಡಲಾಗಿದೆ ಹಾಗೂ ದಿಲ್ಲಿಯ ಕೋಟಾವನ್ನು ಇತರ ರಾಜ್ಯಗಳಿಗೆ ತಿರುಗಿಸಲಾಗಿದೆ. ಡೆಲ್ ನಲ್ಲಿ ಆಕ್ಸಿಜೆನ್ ಒಂದು ಎಮರ್ಜೆನ್ಸಿ ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News