ಕೊರೋನ ಲಸಿಕೆ ಹಂಚಿಕೆಯಲ್ಲಿ ಕೇಂದ್ರದ ತಾರತಮ್ಯದ ಕಾರ್ಯನೀತಿ: ರಾಹುಲ್ ಗಾಂಧಿ ಟೀಕೆ

Update: 2021-04-20 17:41 GMT

ಹೊಸದಿಲ್ಲಿ, ಎ.20: ಕೊರೋನ ಲಸಿಕೆಯ ವಿಷಯದಲ್ಲಿ ಕೇಂದ್ರ ಸರಕಾರದ ಕಾರ್ಯನೀತಿ ಪ್ರತಿಗಾಮಿಯಾಗಿದೆ ಮತ್ತು ಪಕ್ಷಪಾತದಿಂದ ಕೂಡಿದೆ. ಬಡ ಮತ್ತು ದುರ್ಬಲ ವರ್ಗದವರಿಗೆ ಲಸಿಕೆ ಲಭ್ಯವಾಗುವ ಖಾತರಿಯಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಿಸಿದ್ದಾರೆ.

‘18ರಿಂದ 45 ವರ್ಷದೊಳಗಿನವರಿಗೆ ಉಚಿತ ಲಸಿಕೆಯಿಲ್ಲ. ಬೆಲೆ ನಿಯಂತ್ರಣವೂ ಇಲ್ಲ. ಮಧ್ಯವರ್ತಿಗಳು ಲಸಿಕೆ ಪೂರೈಸುತ್ತಾರೆ. ಬಡವರಿಗೆ, ದುರ್ಬಲ ವರ್ಗದವರಿಗೆ ಲಸಿಕೆ ಲಭಿಸುವ ಖಾತರಿಯಿಲ್ಲ. ಭಾರತ ಸರಕಾರದ ಲಸಿಕೆ ತಾರತಮ್ಯ- ಹಂಚಿಕೆ ಕಾರ್ಯತಂತ್ರವಲ್ಲ’ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ಮೇ 1ರಿಂದ ಎಲ್ಲಾ ವಯಸ್ಕರೂ ಲಸಿಕೆ ಪಡೆಯಲು ಅರ್ಹರಾಗಿದ್ದಾರೆ ಮತ್ತು ರಾಜ್ಯಗಳು ಹಾಗೂ ಖಾಸಗಿ ಆಸ್ಪತ್ರೆಗಳು ಉತ್ಪಾದಕರಿಂದ ನೇರವಾಗಿ ಲಸಿಕೆ ಖರೀದಿಸಬಹುದು ಎಂದು ಸರಕಾರ ಸೋಮವಾರ ಘೋಷಿಸಿದೆ. ದೇಶದಲ್ಲಿ ಕಳೆದ 15 ದಿನಗಳಲ್ಲೇ 25 ಲಕ್ಷಕ್ಕೂ ಹೆಚ್ಚು ಕೊರೋನ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಲಸಿಕೆ ಹಾಕುವ ಪ್ರಕ್ರಿಯೆಯನ್ನು ತೀವ್ರಗೊಳಿಸಲು ನಿರ್ಧರಿಸಿರುವುದಾಗಿ ಸರಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News