ಮುಂಬೈ ಇಂಡಿಯನ್ಸ್ ಗೆ ಸೋಲುಣಿಸಿದ ಡೆಲ್ಲಿ ಕ್ಯಾಪಿಟಲ್ಸ್

Update: 2021-04-20 18:09 GMT

ಚೆನ್ನೈ: ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಿದ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್(45, 42 ಎಸೆತ) ಹಾಗೂ ಹಿರಿಯ ಸ್ಪಿನ್ನರ್ ಅಮಿತ್ ಮಿಶ್ರಾ (4-24) ಅವರ ಅತ್ಯುತ್ತಮ ಬೌಲಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ದ 6 ವಿಕೆಟ್ ಗಳ ಅಂತರದಿಂದ ಜಯ ಸಾಧಿಸಿದೆ.

ಗೆಲ್ಲಲು 138 ರನ್ ಸುಲಭ ಸವಾಲು ಬೆನ್ನಟ್ಟಿದ ಡೆಲ್ಲಿ 19.1 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿತು.

ಡೆಲ್ಲಿ ಪರ ಧವನ್ ಸರ್ವಾಧಿಕ ಸ್ಕೋರ್(45, 42 ಎಸೆತ, 5 ಬೌಂ. 1 ಸಿ.), ಸ್ಟೀವನ್ ಸ್ಮಿತ್(33), ಲಲಿತ್ ಯಾದವ್ (ಔಟಾಗದೆ 22) ಹಾಗೂ ಶಿಮ್ರೊನ್ ಹೆಟ್ಮೆಯರ್ (ಔಟಾಗದೆ 14)ಎರಡಂಕೆಯ ಸ್ಕೋರ್ ಗಳಿಸಿದರು.

ಮುಂಬೈ ಪರ ಕಿರೊನ್ ಪೊಲಾರ್ಡ್ (1-9), ಜಯಂತ್ ಯಾದವ್ (1-25), ಬುಮ್ರಾ(1-32) ಹಾಗೂ ರಾಹುಲ್ ಚಹಾರ್(1-29) ತಲಾ ಒಂದು ವಿಕೆಟ್  ಪಡೆದರು.  

ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದಕೊಂಡ ಮುಂಬೈ ತಂಡ ಮಿಶ್ರಾ(4-24) ಹಾಗೂ ಅವೇಶ್ ಖಾನ್(2-15)ದಾಳಿಗೆ ಸಿಲುಕಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲಷ್ಟೇ ಶಕ್ತವಾಯಿತು.

ಮುಂಬೈ ಪರ ನಾಯಕ ರೋಹಿತ್ ಶರ್ಮಾ(44, 30 ಎಸೆತ, 3 ಬೌಂ., 3 ಸಿ.)ಅಗ್ರ ಸ್ಕೋರರ್ ಎನಿಸಿಕೊಂಡರು. ಇಶಾನ್ ಕಿಶನ್(26) ಸೂರ್ಯಕುಮಾರ್ ಯಾದವ್(24)ಹಾಗೂ ಜಯಂತ್ ಯಾದವ್ (23) ಎರಡಂಕೆಯ ಸ್ಕೋರ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News