ಇಂಡೋನೇಶ್ಯ: 53 ನಾವಿಕರನ್ನು ಹೊತ್ತ ಸಬ್‌ಮರೀನ್ ನಾಪತ್ತೆ

Update: 2021-04-21 16:03 GMT
ಫೋಟೊ ಕೃಪೆ: twitter.com/VerdantSquare

ಜಕಾರ್ತ (ಇಂಡೋನೇಶ್ಯ), ಎ. 21: 53 ನಾವಿಕ ಸಿಬ್ಬಂದಿಯಿದ್ದ ಸಬ್‌ಮರೀನ್‌ಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಇಂಡೋನೇಶ್ಯ ಸೇನೆ ಬುಧವಾರ ಹೇಳಿದೆ. ಬಾಲಿ ಕರಾವಳಿಯ ಸಮುದ್ರದಲ್ಲಿ ಬುಧವಾರ ನೌಕಾಪಡೆ ಅಭ್ಯಾಸ ನಡೆಸುತ್ತಿದ್ದ ವೇಳೆ ಸಬ್‌ಮರೀನ್ ಸಂಪರ್ಕ ಕಳೆದುಕೊಂಡಿತು ಎಂದು ಅದು ತಿಳಿಸಿದೆ.

 ಸಬ್‌ಮರೀನ್‌ನ ಶೋಧಕ್ಕಾಗಿ ಬಾಲಿ ದ್ವೀಪದ ಉತ್ತರದ ಕರಾವಳಿಯ ಸಮುದ್ರಕ್ಕೆ ಯುದ್ಧನೌಕೆಗಳನ್ನು ಕಳಿಸಿರುವುದಾಗಿ ಇಂಡೋನೇಶುಯ ಸೇನೆಯ ಮುಖ್ಯಸ್ಥ ಹದಿ ತ್ಯಾಜಾಂಟೊ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು. ಈ ನಿಟ್ಟಿನಲ್ಲಿ ಸಹಾಯ ಮಾಡುವಂತೆ ನೆರೆಯ ಸಿಂಗಾಪುರ ಮತ್ತು ಆಸ್ಟ್ರೇಲಿಯ ದೇಶಗಳಿಗೆ ಮನವಿ ಮಾಡಲಾಗಿದೆ ಎಂದರು.

ಸುಮಾರು 700 ಮೀಟರ್ ಆಳದಲ್ಲಿದೆ ಎನ್ನಲಾದ ಸಬ್‌ಮರೀನ್‌ನಲ್ಲಿ 53 ಸಿಬ್ಬಂದಿಯಿದ್ದಾರೆ ಎಂದು ಅವರು ತಿಳಿಸಿದರು.

ಜರ್ಮನಿ ನಿರ್ಮಿತ 43 ವರ್ಷ ಹಳೆಯ ಸಬ್‌ಮರೀನ್‌ನೊಂದಿಗಿನ ಸಂಪರ್ಕವು ಬುಧವಾರ ಬೆಳಗ್ಗೆ ಕಡಿಯಿತು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

1,300 ಟನ್ ಭಾರದ ಸಬ್‌ಮರೀನ್ ‘ನಂಗಾಲ 402’ನ್ನು 1978ರಲ್ಲಿ ನಿರ್ಮಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News