ಜಪಾನ್ ಪ್ರಧಾನಿಯ ಭಾರತ ಭೇಟಿ ರದ್ದು

Update: 2021-04-21 16:20 GMT

ಟೋಕಿಯೊ (ಜಪಾನ್), ಎ. 21: ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ ಪ್ರತಿ ದಿನ ಅಗಾಧ ಪ್ರಮಾಣದಲ್ಲಿ ಏರುತ್ತಿರುವ ಹಿನ್ನೆಲೆಯಲ್ಲಿ, ಜಪಾನ್ ಪ್ರಧಾನಿ ಯೊಶಿಹಿಡೆ ಸುಗ ತನ್ನ ಭಾರತ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.

ಕೊರೋನ ವೈರಸ್ ಸೋಂಕು ಪ್ರಕರಣಗಳು ಅಗಾಧವಾಗಿ ಏರುತ್ತಿರುವುದನ್ನು ಪರಿಗಣಿಸಿ ಟೋಕಿಯೊ ಮತ್ತು ಇತರ ಹಲವಾರು ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿಯನ್ನು ಹೇರುವ ಸಾಧ್ಯತೆಯನ್ನು ಜಪಾನ್ ಸರಕಾರ ಪರಿಗಣಿಸುತ್ತಿದೆ. ಅದೇ ವೇಳೆ, ಭಾರತದಲ್ಲಿ ಬುಧವಾರ 2,95,041 ಹೊಸ ಸೋಂಕು ಪ್ರಕರಣಗಳು ಮತ್ತು 2,023 ಸಾವುಗಳು ವರದಿಯಾಗಿವೆ.

ಅವರು ತನ್ನ ಫಿಲಿಪ್ಪೀನ್ಸ್ ಪ್ರವಾಸವನ್ನೂ ರದ್ದುಗೊಳಿಸಿದ್ದಾರೆ. ಎಪ್ರಿಲ್ ಅಂತ್ಯದ ವೇಳೆಗೆ ಅವರು ಈ ಎರಡು ದೇಶಗಳಿಗೆ ಪ್ರವಾಸ ಕೈಗೊಳ್ಳುವ ಕಾರ್ಯಕ್ರಮವಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News