ಕೇಂದ್ರ ಶಿಕ್ಷಣ ಸಚಿವರಿಗೆ ಕೋವಿಡ್-19 ಸೋಂಕು
Update: 2021-04-21 22:54 IST
ಹೊಸದಿಲ್ಲಿ,ಎ.21: ತಾನು ಕೋವಿಡ್-19 ಸೋಂಕಿಗೊಳಗಾಗಿದ್ದು,ವೈದ್ಯರ ಸಲಹೆಯಂತೆ ಔಷಧಿಗಳು ಮತ್ತು ಚಿಕಿತ್ಸೆಯನ್ನು ಪಡೆಯುತ್ತಿದ್ದೇನೆ. ಇತ್ತೀಚಿಗೆ ತನ್ನ ಸಂಪರ್ಕದಲ್ಲಿದ್ದವರು ಕೋರೋನವೈರಸ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಷಾಂಕ್ ಅವರು ಬುಧವಾರ ಟ್ವೀಟಿಸಿದ್ದಾರೆ.
ಅಗತ್ಯ ಮುನ್ನೆಚ್ಚರಿಕೆಗಳೊಂದಿಗೆ ಶಿಕ್ಷಣ ಸಚಿವಾಲಯವು ಎಂದಿನಂತೆ ಕಾರ್ಯಾಚರಿಸಲಿದೆ ಎಂದು ಅವರು ಭರವಸೆ ನೀಡಿದ್ದಾರೆ.
ತನ್ಮಧ್ಯೆ ದೇಶದಲ್ಲಿ ಬುಧವಾರ ಬೆಳಿಗ್ಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ 2,95,041 ಹೊಸ ಕೊರೋನವೈರಸ್ ಪ್ರಕರಣಗಳು ಮತ್ತು 2,023 ಸಾವುಗಳು ದಾಖಲಾಗಿವೆ. ಇದು ಸಾಂಕ್ರಾಮಿಕವು ಆರಂಭಗೊಂಡಾಗಿನಿಂದ ದೈನಂದಿನ ಪ್ರಕರಣಗಳ ಸಾರ್ವಕಾಲಿಕ ದಾಖಲೆಯಾಗಿದೆ.