ಲಾಕ್‌ ಡೌನ್‌ ನಲ್ಲಿ ಪ್ರಿಯತಮೆಯನ್ನು ಹೇಗೆ ಭೇಟಿ ಮಾಡಬಹುದೆಂದು ಪ್ರಶ್ನಿಸಿದ ಟ್ವಿಟರ್‌ ಬಳಕೆದಾರ

Update: 2021-04-22 14:59 GMT

ಮುಂಬೈ: ದೇಶದಾದ್ಯಂತ ಕೊರೋನ ವೈರಸ್‌ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡು ಬರುತ್ತಿದೆ. ಮಹಾರಾಷ್ಟ್ರದಲ್ಲೂ ಸೋಂಕಿತರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಲಾಕ್‌ ಡೌನ್‌ ಘೋಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಟ್ವಿಟರ್‌ ಬಳಕೆದಾರರೋರ್ವರ ಟ್ವೀಟ್‌ ಮತ್ತು ಮುಂಬೈ ಪೊಲೀಸರು ನೀಡಿದ ಪ್ರತಿಕ್ರಿಯೆ ಸದ್ಯ ವೈರಲ್‌ ಆಗಿದೆ.

ಅಶ್ವಿನ್‌ ವಿನೋದ್‌ ಎಂಬ ಟ್ವಿಟರ್‌ ಬಳಕೆದಾರ "ನಾನು ನನ್ನ ಗರ್ಲ್‌ ಫ್ರೆಂಡ್‌ ಅನ್ನು ಭೇಟಿಯಾಗಲು ಹೋಗಬೇಕಾದರೆ (ವಾಹನದಲ್ಲಿ) ಯಾವ ಸ್ಟಿಕ್ಕರ್‌ ಅನ್ನು ಬಳಸಬೇಕು? ನಾನು ಆಕೆಯನ್ನು ಮಿಸ್‌ ಮಾಡುತ್ತಿದ್ದೇನೆ" ಎಂದು ಮುಂಬೈ ಪೊಲೀಸರನ್ನು ಟ್ಯಾಗ್‌ ಮಾಡಿ ಪ್ರಶ್ನಿಸಿದ್ದ. 

ಈ ಪ್ರಶ್ನೆಗೆ ಉತ್ತರಿಸಿದ ಮುಂಬೈ ಪೊಲೀಸ್‌ "ಇದು ನಿಮಗೆ ಅವಶ್ಯಕವಾದದ್ದೆಂದು ನಮಗೆ ತಿಳಿದಿದೆ. ಆದರೆ ಇದು ನಮ್ಮ ಅವಶ್ಯಕ ಮತ್ತು ತುರ್ತು ಪಟ್ಟಿಯಲ್ಲಿ ಒಳಪಡುವುದಿಲ್ಲ. ದೂರವು ನಮ್ಮ ಹೃದಯವನ್ನು ಉತ್ತಮವಾಗಿಸುತ್ತದೆ, ಈಗ ನೀವು ಆರೋಗ್ಯಕರವಾಗಿ ಇರುವ ಹಾಗೆ. ಜೀವನಪೂರ್ತಿ ಒಂದಾಗಿರುವಂತೆ ನಾವು ನಿಮಗೆ ಹಾರೈಸುತ್ತೇವೆ. ಇದು ಒಂದು ಹಂತವಷ್ಟೇ" ಎಂದು ಟ್ವೀಟ್‌ ಮಾಡಿದ್ದಾರೆ.

ಈ ಟ್ವೀಟ್‌ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದ್ದು, ಮುಂಬೈ ಪೊಲೀಸರ ಕುರಿತು ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ,.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News