ಹರ್ಯಾಣ: 1,700ಕ್ಕೂ ಅಧಿಕ ಡೋಸ್ ಕೋವಿಡ್ ಲಸಿಕೆ ಕಳವು

Update: 2021-04-22 18:06 GMT

ಚಂಡಿಗಢ, ಎ. 22: ಹರ್ಯಾಣದ ಜಿಂದ್ನ ಸರಕಾರಿ ಆಸ್ಪತ್ರೆಯಿಂದ 1,700ಕ್ಕೂ ಅಧಿಕ ಡೋಸ್ ಕೋವಿಡ್-19 ಲಸಿಕೆ ಕಳವುಗೈಯಲಾಗಿದೆ. ಜಿಂದ್ ನ ಸಿವಿಲ್ ಆಸ್ಪತ್ರೆಯಲ್ಲಿ ಬುಧವಾರ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ಪತ್ರೆಯಿಂದ ಒಟ್ಟು 1,270 ಡೋಸ್ ಕೋವಿಶೀಲ್ಡ್ ಹಾಗೂ 440 ಡೋಸ್ ಕೋವ್ಯಾಕ್ಸಿನ್ ಲಸಿಕೆಗಳನ್ನು ಕಳವುಗೈಯಲಾಗಿದೆ ಎಂದು ಸಿವಿಲ್ ಲೈನ್ ಪೊಲೀಸ್ ಠಾಣೆಯ ಎಸ್ಎಚ್ಒ ರಾಜೇಂದರ್ ಸಿಂಗ್ ಹೇಳಿದ್ದಾರೆ.

ದಾಸ್ತಾನು ಕೊಠಡಿಯಲ್ಲಿ ಇರಿಸಲಾಗಿದ್ದ ಇತರ ಯಾವುದೇ ಲಸಿಕೆ, ಔಷಧ, ನಗದನ್ನು ಆರೋಪಿ ಕಳವುಗೈದಿಲ್ಲ ಎಂದು ಅವರು ಹೇಳಿದ್ದಾರೆ. ದಾಸ್ತಾನು ಕೊಠಡಿಯ ಬೀಗ ಹಾಗೂ ಫ್ರೀಜರ್ ಮುರಿದಿರುವುದು ಗುರುವಾರ ಬೆಳಗ್ಗೆ ಸ್ವಚ್ಛತಾ ಕಾರ್ಮಿಕನ ಗಮನಕ್ಕೆ ಬಂದ ಬಳಿಕ ಇದು ಬಹಿರಂಗಗೊಂಡಿದೆ. ಈಗ ಸಾಕಷ್ಟು ಕೋವಿಡ್-19 ಲಸಿಕೆಯ ಡೋಸ್ಗಳು ಲಭ್ಯವಿವೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News