ಹೆತ್ತವರಿಗೆ ಕೊರೋನ ಸೋಂಕು: ಕಟ್ಟಡದಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಶರಣಾದ ಯುವಕ

Update: 2021-04-22 18:23 GMT

ಹೊಸದಿಲ್ಲಿ, ಎ. 22: ಹತ್ತೊಂಬತ್ತು ವರ್ಷದ ಯುವಕನೋರ್ವ ಬುಧವಾರ ಪಂಚಕುಲದ ಸೆಕ್ಟರ್ 20ರಲ್ಲಿರುವ ಕಟ್ಟಡದ 8ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮರಣೋತ್ತರ ಪರೀಕ್ಷೆಯಲ್ಲಿ ಆತನಿಗೆ ಕೂಡ ಕೊರೋನ ಸೋಂಕು ತಗಲಿರುವುದು ದೃಢಪಟ್ಟಿದೆ. ಘಟನೆ ಬಗ್ಗೆ ಬೆಳಗ್ಗೆ 6.30ಕ್ಕೆ ಪೊಲೀಸ್ ಠಾಣೆಗೆ ಮೊದಲ ಮಾಹಿತಿ ಬಂದಿತ್ತು ಎಂದು ಸೆಕ್ಟರ್ 20 ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ದಿಲೀಪ್ ಅವರು ಹೇಳಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದ ತಂಡ ಮೃತದೇಹವನ್ನು ನಾಗರಿಕ ಆಸ್ಪತ್ರೆಗೆ ಕೊಂಡೊಯ್ದರು.

 ‘‘ನಾವು ಸಮೀಪದ ಕಟ್ಟಡದಲ್ಲಿರುವವರಲ್ಲಿ ವಿಚಾರಿಸಿದೆವು. ಆದರೆ, ಯುವಕನನ್ನು ಯಾರೂ ಗುರುತಿಸಲಿಲ್ಲ’’ ಎಂದು ದಿಲೀಪ್ ಹೇಳಿದ್ದಾರೆ. ಆದರೆ, ಬೆಳಗ್ಗೆ 9 ಗಂಟೆಗೆ ಕೊರೋನ ಸೋಂಕಿತರಾದ ಹಾಗೂ ಐಸೋಲೇಶನ್ಗೆ ಒಳಗಾದ ಹೆತ್ತವರು ಪೊಲೀಸ್ ಠಾಣೆಗೆ ಕರೆ ಮಾಡಿದರು ಹಾಗೂ ಮೃತದೇಹವನ್ನು ತಮ್ಮ ಪುತ್ರನೆಂದು ತಿಳಿಸಿದರು ಎಂದು ದಿಲೀಪ್ ಹೇಳಿದ್ದಾರೆ. ಮೃತಪಟ್ಟ ಯುವಕನನ್ನು ಸೆಕ್ಟರ್ 20ರ ನಿವಾಸಿ ಶ್ರೇಯಾಂಕ್ ಪಾಠಕ್ ಎಂದು ಗುರುತಿಸಲಾಗಿದೆ. ಆತ ಮೊದಲ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News