​ದೇಶದಲ್ಲಿ ಸತತ 2ನೇ ದಿನ 3 ಲಕ್ಷಕ್ಕೂ ಅಧಿಕ ಕೋವಿಡ್ ಪಾಸಿಟಿವ್

Update: 2021-04-23 03:51 GMT

ಹೊಸದಿಲ್ಲಿ : ಸತತ ಎರಡನೇ ದಿನ ಮೂರು ಲಕ್ಷಕ್ಕಿಂತ ಅಧಿಕ ಕೋವಿಡ್-19 ಪ್ರಕರಣಗಳು ದೇಶದಲ್ಲಿ ದಾಖಲಾಗಿದ್ದು, ಗುರುವಾರ ಇದುವರೆಗಿನ ಗರಿಷ್ಠ ಅಂದರೆ 3.3 ಲಕ್ಷ ಪ್ರಕರಣಗಳು ಸೇರ್ಪಡೆಯಾಗಿವೆ.

ಸತತ ಎರಡು ದಿನಗಳ ಕಾಲ ವಿಶ್ವದ ಯಾವುದೇ ದೇಶಗಳಲ್ಲಿ ಇಷ್ಟೊಂದು ಪ್ರಕರಣಗಳು ವರದಿಯಾಗಿರಲಿಲ್ಲ. ಎರಡು ದಿನಗಳಲ್ಲಿ ಆರು ಲಕ್ಷಕ್ಕಿಂತ ಅಧಿಕ ಪ್ರಕರಣಗಳು ದೇಶದಲ್ಲಿ ವರದಿಯಾಗಿದೆ.

ಸತತ 17ನೇ ದಿನಗಳಿಂದ ದೇಶದಲ್ಲಿ ಲಕ್ಷಕ್ಕಿಂತ ಅಧಿಕ ಕೋವಿಡ್ ಪಾಸಿಟಿವ್ ವರದಿಯಾಗುತ್ತಿವೆ. ಸೋಂಕಿತರ ಸಾವಿನ ಸಂಖ್ಯೆ ಕೂಡಾ ಆತಂಕಕಾರಿ ಪ್ರಮಾಣದಲ್ಲಿದ್ದು, ಸತತ 10ನೇ ದಿನ ಸಾವಿನ ಸಂಖ್ಯೆ ಸಾವಿರಕ್ಕಿಂತ ಅಧಿಕವಿದೆ. ಕಳೆದ ಮೂರು ದಿನಗಳಿಂದ ಈ ಪ್ರಮಾಣ ಎರಡು ಸಾವಿರಕ್ಕಿಂತ ಅಧಿಕವಿದೆ. ಕಳೆದ 10 ದಿನಗಳಲ್ಲಿ 15 ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಮಹಾರಾಷ್ಟ್ರದಲ್ಲಿ 67,103 ಹೊಸ ಪ್ರಕರಣಗಳು ಸೇರ್ಪಡೆಯಾಗಿದ್ದು, ಉತ್ತರ ಪ್ರದೇಶ (34,379), ಕೇರಳ (26,885), ದೆಹಲಿ (26169) ಮತ್ತು ಕರ್ನಾಟಕ (25,795) 25 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿದ ಇತರ ನಾಲ್ಕು ರಾಜ್ಯಗಳು.

ಛತ್ತೀಸ್‌ಗಢದಲ್ಲಿ 16750 ಹೊಸ ಪ್ರಕರಣಗಳು ವರದಿಯಾಗಿದ್ದರೆ, ರಾಜಸ್ಥಾನ, ಗುಜರಾತ್, ತಮಿಳುನಾಡು, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಆಂಧ್ರಪ್ರದೇಶದಲ್ಲಿ 10 ರಿಂದ 15 ಸಾವಿರ ಪ್ರಕರಣಗಳು ವರದಿಯಾಗಿವೆ. ಹರ್ಯಾಣ, ಜಾರ್ಖಂಡ್, ಒಡಿಶಾ, ತೆಲಂಗಾಣಗಳಲ್ಲೂ 5 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. 568 ಮಂದಿ ಸೋಂಕಿತರು ಮೃತಪಟ್ಟಿರುವ ಮಹಾರಾಷ್ಟ್ರ, 306 ಸೋಂಕಿತರು ಜೀವ ಕಳೆದುಕೊಂಡಿರುವ ದೆಹಲಿ ಹಾಗೂ ಛತ್ತೀಸ್‌ಗಢ (207) ಅತ್ಯಧಿಕ ಸಾವು ದಾಖಲಿಸಿದ ರಾಜ್ಯಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News