ಭಾರತದ ಆಸ್ಪತ್ರೆಗಳಿಗೆ ಆಕ್ಸಿಜನ್ ಕಳುಹಿಸಲು ಇಮ್ರಾನ್ ಖಾನ್ ಗೆ ಪಾಕ್ ನಾಗರಿಕರ ಆಗ್ರಹ

Update: 2021-04-24 16:39 GMT

ಇಸ್ಲಾಮಾಬಾದ್, ಎ.24: ಕೋವಿಡ್ 19 ರೋಗಿಗಳ ಚಿಕಿತ್ಸೆಗೆ ಆಮ್ಲಜನಕದ ತೀವ್ರ ಕೊರತೆಯನ್ನು ಎದುರಿಸುತ್ತಿರುವ ಭಾರತೀಯ ಆಸ್ಪತ್ರೆಗಳಿಗೆ ಕೂಡಲೇ ಆಮ್ಲಜನಕವನ್ನು ಪೂರೈಕೆ ಮಾಡುವಂತೆ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಒತ್ತಾಯಿಸಿ, ಪಾಕ್ ನಾಗರಿಕರು ಟ್ವಿಟ್ಟರ್ ಅಭಿಯಾನವನ್ನು ಆರಂಭಿಸಿದ್ದಾರೆ.

ಆಮ್ಲಜನಕ ಹಾಗೂ ಇತರ ವೈದ್ಯಕೀಯ ಸಾಮಾಗ್ರಿಗಳನ್ನು ಭಾರತಕ್ಕೆ ಕಳುಹಿಸಿಕೊಡಬೇಕೆಂದು ಪಾಕಿಸ್ತಾನಿ ನಾಗರಿಕರು #india needs oxygen ಎಂಬ ಹ್ಯಾಶ್ಟ್ಯಾಗ್ ನ ಟ್ವಿಟ್ಟರ್ ಅಭಿಯಾನದಲ್ಲಿ ಇಮ್ರಾನ್ ಖಾನ್ ಅವರನ್ನು ಆಗ್ರಹಿಸಿದ್ದಾರೆ.

ಪಾಕಿಸ್ತಾನದಲ್ಲಿ ಶುಕ್ರವಾರ ಈ ಟ್ವಿಟ್ಟರ್ ಅಭಿಯಾನವು ಭಾರೀ ಟ್ರೆಂಡಿಂಗ್ ಆಗಿದ್ದು, ಭಾರೀ ಸಂಖ್ಯೆಯ ಪಾಕ್ ನಾಗರಿಕರು ಪಾಲ್ಗೊಂಡಿದ್ದಾರೆ. ಆಮ್ಲಜನಕದ ಕೊರತೆಯಿಂದಾಗಿ ಬಾಧಿತರಾಗಿರುವ ಕೋವಿಡ್ ರೋಗಿಗಳ ದುಃಖತಪ್ತ ಬಂಧುಗಳ ಮನಕಲಕುವ ವಿಡಿಯೋದ ಜೊತೆ ಟ್ವಿಟ್ಟರಿಗರೊಬ್ಬರು ಇಮ್ರಾನ್ ಖಾನ್ ರಿಗೆ ಭಾವಪೂರ್ಣವಾಗಿ ವಿನಂತಿಸಿದ್ದಾರೆ.

ಇನ್ನೋರ್ವ ಟ್ವಿಟ್ಟರ್ ಬಳಕೆದಾರ, ಭಾರತಕ್ಕೆ ನೆರವಾಗುವಂತೆ ಪಾಕ್ ಪ್ರಧಾನಿಗೆ ಮನವಿ ಮಾಡಿರುವ ಜೊತೆಗೆ ಈ ಸೋಂಕು ರೋಗದ ಅಂತ್ಯಕ್ಕೆ ನೆರವಾಗಲು ಮಾಸ್ಕ್ ಧಾರಣೆಯ ಅಗತ್ಯವನ್ನು ಪುನರುಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News