×
Ad

"ಮುಂದೆ ಕೋವಿಡ್‌ ಸುನಾಮಿ ಬರಲಿದೆ, ಸರಕಾರ ನನ್ನ ಮಾತು ಕೇಳುತ್ತಿಲ್ಲ": ರಾಹುಲ್‌ ಗಾಂಧಿಯ ಕಳೆದ ವರ್ಷದ ವೀಡಿಯೊ ವೈರಲ್

Update: 2021-04-24 23:00 IST

ಹೊಸದಿಲ್ಲಿ: ದೇಶದಲ್ಲಿನ ಕೊರೋನ ವೈರಸ್‌ 2ನೇ ಅಲೆಯ ಪ್ರಕರಣಗಳ ಹೆಚ್ಚಳದ ಕುರಿತು ದಿಲ್ಲಿ ಹೈಕೋರ್ಟ್‌ ʼಸುನಾಮಿʼ ಎಂದು ಉಲ್ಲೇಖಿಸಿದ ಬಳಿಕ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿಯವರ ಹಳೆಯ ವೀಡಿಯೋ ವೈರಲ್‌ ಆಗಿದೆ.

ಮಾರ್ಚ್‌ 17,2020 ರಂದು ರಾಹುಲ್‌ ಗಾಂಧಿ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ, ನಾನು ಸರಕಾರಕ್ಕೆ  ಕೋವಿಡ್‌ ಸುನಾಮಿ ಬರುವ ಕುರಿತು ಎಚ್ಚರಿಕೆ ನೀಡುತ್ತಲೇ ಇದ್ದೇನೆ. ಮುಂದಿನ ದಿನಗಳಲ್ಲಿ ನಮ್ಮ ಜನರು ಅತೀದೊಡ್ಡ ಬಿಕ್ಕಟ್ಟನ್ನು ಎದುರಿಸಲಿದ್ದಾರೆ ಎಂದು ಹೇಳಿದ್ದರು. 

"ಒಂದು ಭೀಕರ ಸುನಾಮಿ ಬರುವ ಕುರಿತು ನಾನು ಸರಕಾರಕ್ಕೆ ಎಚ್ಚರಿಕೆ ನೀಡುತ್ತಲೇ ಇದ್ದೇನೆ. ನಾನಿದನ್ನು ಮತ್ತೆ ಮತ್ತೆ ಹೇಳುತ್ತಿದ್ದೇನೆ. ಯಾರೂ ನನ್ನ ಮಾತನ್ನು ಕೇಳುತ್ತಲೇ ಇಲ್ಲ. ನಾನಿದನ್ನು ಹೇಳುತ್ತಿರುವುದಕ್ಕೆ ಕ್ಷಮಿಸಿ, ನಮ್ಮ ಜನರು ನಾವು ಊಹಿಸಲಾಗದಂತಹ ಕೆಟ್ಟ ಬಿಕ್ಕಟ್ಟಿಗೆ ಒಳಗಾಗಲಿದ್ದಾರೆ" ಎಂದು ರಾಹುಲ್‌ ಗಾಂಧಿ ವೀಡಿಯೋದಲ್ಲಿ ಹೇಳಿದ್ದಾರೆ.

ʼನಾವು ಕೋವಿಡ್‌ ಅನ್ನು ಅಲೆಗಳಿಗೆ ಹೋಲಿಸುತ್ತಿದ್ದೇವೆ. ಆದರೆ ಅದು ಅಲೆ ಅಲ್ಲ, ಸುನಾಮಿ" ಎಂದು ದಿಲ್ಲಿ ಹೈಕೋರ್ಟ್‌ ಇಂದು ಹೇಳಿಕೆ ನೀಡಿತ್ತು.

"ರಾಹುಲ್‌ ಗಾಂಧಿ ನೀಡಿದ್ದ ಎಚ್ಚರಿಕೆಯನ್ನು ಪಾಲಿಸಿದ್ದಿದ್ದರೆ ದೇಶಕ್ಕೆ ಇಂದು ಇಂತಹಾ ಅನಾಹುತ ಎದುರಾಗುತ್ತಿರಲಿಲ್ಲ" ಎಂದು ಟ್ವಟರ್‌ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಟ್ವಿಟರ್‌ ನಲ್ಲಿ ʼಸುನಾಮಿʼ ಟ್ರೆಂಡಿಂಗ್‌ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News