ಭಾರತಕ್ಕೆ ಆಮ್ಲಜನಕ, ವೆಂಟಿಲೇಟರ್ ಕಳುಹಿಸಲು ಆಸ್ಟ್ರೇಲಿಯ ನಿರ್ಧಾರ
ಮೆಲ್ಬರ್ನ್, ಎ. 26: ಅಗಾಧ ಪ್ರಮಾಣದಲ್ಲಿ ಹೆಚ್ಚುತ್ತಿರುವ ಕೊರೋನ ವೈರಸ್ ಸೋಂಕು ಪ್ರಕರಣಗಳನ್ನು ನಿಭಾಯಿಸುವಲ್ಲಿ ಭಾರತಕ್ಕೆ ನೆರವಾಗುವುದಕ್ಕಾಗಿ ಆಸ್ಟ್ರೇಲಿಯವು ಆಮ್ಲಜನಕ, ವೆಂಟಿಲೇಟರ್‌ಗಳು ಮತ್ತು ವೈಯಕ್ತಿಕ ರಕ್ಷಣಾ ಸಲಕರಣೆಗಳನ್ನು ಕಳುಹಿಸುವುದು ಎಂದು ಆರೋಗ್ಯ ಸಚಿವ ಗ್ರೆಗ್ ಹಂಟ್ ಸೋಮವಾರ ತಿಳಿಸಿದ್ದಾರೆ.
ಭಾರತಕ್ಕೆ ಸಹಾಯವಾಗುವಂತೆ ಏನನ್ನು ಕಳುಹಿಸಬಹುದು ಎಂಬ ಬಗ್ಗೆ ಆಸ್ಟ್ರೇಲಿಯ ಸರಕಾರವು ಪರಿಶೀಲನೆ ನಡೆಸುತ್ತಿದೆ ಎಂದು ಹಂಟ್ ಹೇಳಿರುವುದಾಗಿ ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಶನ್ ಸುದ್ದಿವಾಹಿನಿ ವರದಿ ಮಾಡಿದೆ.
‘‘ಭಾರತವು ಅಕ್ಷರಶಃ ಆಮ್ಲಜನಕಕ್ಕಾಗಿ ಏದುಸಿರು ಬಿಡುತ್ತಿದೆ’’ ಎಂದು ಅವರು ಹೇಳಿದರು.
ಯಾವ ರೀತಿಯಲ್ಲಿ ನೆರವನ್ನು ಕಳುಹಿಸಲಾಗುವುದು ಎಂಬ ಬಗ್ಗೆ ಆಸ್ಟ್ರೇಲಿಯವು ಮಂಗಳವಾರ ಪ್ರಕಟಿಸಲಿದೆ. ಇದರಲ್ಲಿ ಆಮ್ಲಜನಕ, ವೆಂಟಿಲೇಟರ್‌ಗಳು ಮತ್ತು ವೈಯಕ್ತಿಕ ರಕ್ಷಣಾ ಸಲಕರಣೆಗಳು ಇರುತ್ತವೆ ಎನ್ನಲಾಗಿದೆ. ಆದರೆ, ಆಸ್ಟ್ರೇಲಿಯವು ಲಸಿಕೆಯನ್ನು ಕಳುಹಿಸುವುದಿಲ್ಲ.