ಫೈಝರ್ ಲಸಿಕೆ ಪಡೆದವರಲ್ಲಿ ಹೃದಯದ ಊತ?: ಇಸ್ರೇಲ್ ತನಿಖೆ

Update: 2021-04-27 17:06 GMT

ಟೆಲ್ ಅವೀವ್ (ಇಸ್ರೇಲ್), ಎ. 27: ಫೈಝರ್ ಮತ್ತು ಬಯೋಎನ್ಟೆಕ್ ಕಂಪೆನಿಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೊರೋನ ವೈರಸ್ ಲಸಿಕೆಯನ್ನು ಪಡೆದವರಲ್ಲಿ ಪತ್ತೆಯಾಗಿದೆ ಎನ್ನಲಾದ ಹಲವಾರು ಹೃದಯದ ಊತ ಪ್ರಕರಣಗಳ ಬಗ್ಗೆ ಇಸ್ರೇಲ್ ತನಿಖೆ ನಡೆಸುತ್ತಿದೆ.

ಇಸ್ರೇಲ್ ನಲ್ಲಿ ಫೈಝರ್-ಬಯೋಎನ್ಟೆಕ್ ಲಸಿಕೆಯನ್ನು 50 ಲಕ್ಷಕ್ಕೂ ಅಧಿಕ ಮಂದಿಗೆ ನೀಡಲಾಗಿದೆ.

ಹೃದಯದ ಊತ ಪ್ರಕರಣಗಳಿಗೂ ಫೈಝರ್ ಲಸಿಕೆಗೂ ಸಂಬಂಧವಿದೆಯೇ ಎನ್ನುವುದನ್ನು ಆರೋಗ್ಯ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಕೊರೋನ ಕಮಿಶನರ್ ನಚ್ಮನ್ ಆಶ್, ರೇಡಿಯೊ 103ಎಫ್ಎಮ್ಗೆ ರವಿವಾರ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

ಹೃದಯದ ಸ್ನಾಯುವಿನ ಊತಕ್ಕೆ ಸಂಬಂಧಿಸಿದ 62 ಪ್ರಕರಣಗಳನ್ನು ಸರಕಾರ ಗುರುರಿಸಿದೆ ಎಂದು ಚಾನೆಲ್ 12 ಕಳೆದ ವಾರ ವರದಿ ಮಾಡಿತ್ತು. ಲಸಿಕೆ ಸ್ವೀಕರಿಸಿದ ಪ್ರತಿ ಒಂದು ಲಕ್ಷ ಜನರಲ್ಲಿ ಒಬ್ಬರಲ್ಲಿ ಈ ಸಮಸ್ಯೆ ಕಂಡುಬಂದಿದೆ. 18ರಿಂದ 30 ವರ್ಷ ವಯಸ್ಸಿನ ಪುರುಷರಲ್ಲಿ 20,000ದಲ್ಲಿ ಒಬ್ಬರಲ್ಲಿ ಈ ಲಕ್ಷಣ ಪತ್ತೆಯಾಗಿದೆ. ಇಬ್ಬರು ಮೃತಪಟ್ಟಿದ್ದಾರೆ ಹಾಗೂ ಉಳಿದವರು ಚೇತರಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News