40 ವರ್ಷದ ಸೋಂಕಿತನಿಗೆ ಆಸ್ಪತ್ರೆಯ ಹಾಸಿಗೆ ಬಿಟ್ಟು ಕೊಟ್ಟು ಮೃತಪಟ್ಟ ವೃದ್ಧ
Update: 2021-04-28 23:11 IST
ಮುಂಬೈ, ಎ. 28: ಕೊರೋನ ಸೋಂಕಿತ ತನ್ನ 40 ವರ್ಷದ ಪತಿಯನ್ನು ದಾಖಲಿಸಲು ಹಾಸಿಗೆ ಬಿಟ್ಟುಕೊಡುವಂತೆ ಮಹಿಳೆಯೋರ್ವರು ಮನವಿ ಮಾಡಿದ ಹಿನ್ನೆಲೆಯಲ್ಲಿ ಕೊರೋನ ಸೋಂಕಿಗೆ ಚಿಕಿತ್ಸೆ ಪಡೆಯಲು ದಾಖಲಾಗಿದ್ದ 80 ವರ್ಷದ ನಾರಾಯಣ ದಾಭಲ್ಕರ್ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮಾನವೀಯತೆ ಮೆರೆದ ಘಟನೆ ನಾಗಪುರದ ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ನಡೆದಿದೆ.
ಕೊರೋನ ಸೋಂಕಿನಿಂದ ಆಮ್ಲಜನಕದ ಮಟ್ಟ ಇಳಿಕೆಯಾಗುತ್ತಿದ್ದರೂ ವೈದ್ಯರ ಸಲಹೆಗೆ ವಿರುದ್ಧವಾಗಿ ನಿರ್ಧಾರ ತೆಗೆದುಕೊಂಡ ನಾರಾಯಣ ದಾಭಲ್ಕರ್ ಆಸ್ಪತ್ರೆಯಿಂದ ಬಿಡುಗಡೆಯಾದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘‘ನನಗೆ 85 ವರ್ಷ, ನಾನು ಜೀವನ ಮುಗಿಸಿದ್ದೇನೆ. 40 ವರ್ಷದ ಯುವಕನ ಜೀವ ಉಳಿಸುವುದು ಅತಿ ಮುಖ್ಯ. ಅವರ ಮಕ್ಕಳು ಸಣ್ಣವರು. ದಯವಿಟ್ಟು ಅವರಿಗೆ ನನ್ನ ಹಾಸಿಗೆ ನೀಡಿ’’ ಎಂದು ನಾರಾಯಣ ದಾಭಲ್ಕರ್ ವೈದ್ಯರಿಗೆ ತಿಳಿಸಿದ್ದಾರೆ. ಅದರೆ, ಅನಂತರ ನಾರಾಯಣ ದಾಭಲ್ಕರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.