ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮೂವರು ಸಂಸದರಿಗೆ ಸೋಲು: ಬಿಜೆಪಿಗೆ ಗಾಯದ ಮೇಲೆ ಬರೆ

Update: 2021-05-03 11:28 GMT
ಬಾಬುಲ್ ಸುಪ್ರಿಯೋ / ಸ್ವಪನ್ ದಾಸಗುಪ್ತಾ / ಲಾಕೆಟ್ ಚಟರ್ಜಿ (PTI)

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಬಿಜೆಪಿ ಕಣಕ್ಕಿಳಿಸಿದ್ದ ಪಕ್ಷದ ಐದು ಮಂದಿ ಪ್ರಮುಖ ಸಂಸದರ ಪೈಕಿ ಮೂವರು ಸೋಲುಂಡಿರುವುದು ಬಿಜೆಪಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಬಿಜೆಪಿ ಸಂಸದರು ಹಾಗೂ ತಾರಾ ಅಭ್ಯರ್ಥಿಗಳಾದ ಸ್ವಪನ್ ದಾಸಗುಪ್ತಾ, ಲಾಕೆಟ್ ಚಟರ್ಜಿ ಹಾಗೂ ಬಾಬುಲ್ ಸುಪ್ರಿಯೋ ಅವರನ್ನು ಮತದಾರರು ತಿರಸ್ಕರಿಸಿದ್ದಾರೆ. ಉಳಿದಂತೆ ನಿಶಿತ್ ಪ್ರಮಾಣಿಕ್ ಹಾಗೂ ಜಗನ್ನಾಥ್ ಸರ್ಕಾರ್ ಗೆದ್ದಿದ್ದಾರೆ.

ಹೂಗ್ಲಿ ಜಿಲ್ಲೆಯ ತಾರಕೇಶ್ವರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸ್ವಪನ್ ದಾಸಗುಪ್ತಾ ಅವರು ತೃಣಮೂಲ ಕಾಂಗ್ರೆಸ್ ಪಕ್ಷದ ರಮೇಂದು ಸಿನ್ಹರಯ್ ಅವರೆದುರು 7,484 ಮತಗಳ ಅಂತರದಿಂದ ಸೋಲುಂಡಿದ್ದಾರೆ. ಹೂಗ್ಲಿ ಕ್ಷೇತ್ರದ ಸಂಸದರಾಗಿದ್ದ ಲಾಕೆಟ್ ಚಟರ್ಜಿ ಅವರು ಟಿಎಂಸಿಯ ಅಸಿತ್ ಮಜುಮ್ದಾರ್ ಅವರೆದುರು ಚಿನ್ಸುರಾಹ್ ಕ್ಷೇತ್ರದಲ್ಲಿ 18,417 ಮತಗಳ ಅಂತರದಿಂದ ಸೋಲುಂಡಿದ್ದಾರೆ.

ಅಸನ್ಸೋಲ್ ಸಂಸದರಾಗಿದ್ದ ಬಾಬುಲ್ ಸುಪ್ರಿಯೋ ಅವರು ಟಿಎಂಸಿಯ ಅರೂಪ್ ಬಿಸ್ವಾಸ್ ಅವರೆದುರು 50,080 ಮತಗಳ ಅಂತರದಿಂದ ಪರಾಜಯ ಹೊಂದಿದ್ದಾರೆ.

ಉಳಿದಂತೆ ನಿಶಿತ್ ಪ್ರಮಾಣಿಕ್ ಅವರು ಟಿಎಂಸಿಯ ಉದಯನ್ ಗುಹಾ ಅವರೆದುರು ಕೇವಲ 57 ಮತಗಳ ಅಂತರದಿಂದ ಗೆದ್ದಿದ್ದರೆ, ಸರ್ಕಾರ್ ಅವರು ಟಿಎಂಸಿಯ ಅಜೊಯ್ ದೇ ಅವರೆದುರು ಶಾಂತಿಪುರ ಕ್ಷೇತ್ರದಿಂದ 15,878 ಮತಗಳ ಅಂತರದಿಂದ ಗೆದ್ದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News