ಕೋವಿಡ್ ನಿಂದ ತಂದೆಯನ್ನು ಕಳೆದುಕೊಂಡ ಕರ್ನಾಟಕದ ಹುಡುಗನ ನೆರವಿಗೆ ಬಂದ ನಟ ಸಲ್ಮಾನ್ ಖಾನ್
ಮುಂಬೈ: ಕೋವಿಡ್ ಸೋಂಕಿನಿಂದಾಗಿ ತನ್ನ ಕುಟುಂಬದ ಏಕೈಕ ಆಧಾರವಾಗಿದ್ದ ತನ್ನ ತಂದೆಯನ್ನು ಕಳೆದುಕೊಂಡು ಕಷ್ಟದಲ್ಲಿದ್ದ 18 ವರ್ಷದ ಕರ್ನಾಟಕದ ಹುಡುಗನ ನೆರವಿಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಮುಂದೆ ಬಂದಿದ್ದಾರೆ.
ಯುವಕ ಟ್ವಿಟ್ಟರ್ ಮೂಲಕ ನೆರವು ಕೋರಿದ್ದರು. ಈ ಕುರಿತು ಯುವ ಸೇನಾ ನಾಯಕ ರಾಹುಲ್ ಎಸ್ ಕನಾಲ್ ಅವರಿಂದ ತಿಳಿದುಕೊಂಡ ಸಲ್ಮಾನ್, ಆತನ ಕುಟುಂಬಕ್ಕೆ ಅಗತ್ಯ ಆಹಾರ ಸಾಮಗ್ರಿ ಮತ್ತು ಕಲಿಕಾ ಸಾಮಗ್ರಿಗಳನ್ನು ಒದಗಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ರಾಹುಲ್, "ಮುಂದೆ ಆತನಿಗೆ ಯಾವುದೇ ಸಹಾಯ ಬೇಕಿದ್ದರೂ ನಾವಿದ್ದೇವೆ" ಎಂದು ಹೇಳಿದ್ದಾರೆ.
ಕೋವಿಡ್ ಸಂದರ್ಭ ಸಲ್ಮಾನ್ ಖಾನ್ ಅವರು ನಡೆಸುತ್ತಿರುವ ಸಮಾಜ ಸೇವೆ ಕಾರ್ಯಗಳಿಗೆ ಬೆಂಬಲವಾಗಿ ರಾಹುಲ್ ನಿಂತಿದ್ದಾರೆ. ಸಲ್ಮಾನ್ ಅವರು 5,000 ಫ್ರಂಟ್ ಲೈನ್ ಕಾರ್ಯಕರ್ತರಿಗೆ ನೆರವಾಗಿದ್ದಾರೆ. ವೈದ್ಯಕೀಯ ಸವಲತ್ತು, ಆಕ್ಸಿಜನ್ ಸಿಲಿಂಡರ್ ಹಾಗೂ ಆಹಾರ ಪ್ಯಾಕೆಟ್‍ಗಳನ್ನು ಅಗತ್ಯವಿದ್ದವರಿಗೆ ದೇಣಿಗೆ ನೀಡಿದ್ದಾರೆ ಎಂದು ರಾಹುಲ್ ಮಾಹಿತಿ ನೀಡಿದ್ದಾರೆ.